
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಚುನಾವಣೆ ಸಂಬಂಧಿತ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ರಾಜ್ಯದ 29 ಅಧಿಕಾರಿ/ ಸಿಬ್ಬಂದಿ/ ಕ್ಲಬ್ ಗಳನ್ನು ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒಗಳಾದ ಶಶಿಧರ ಕುರೇರ ಮತ್ತು ಸುರೇಶ ಇಟ್ನಾಳ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜನೆವರಿ 25ರಂದು ಬೆಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ನಾಲ್ವರು ಜಿಲ್ಲಾ ಚುನಾವಣಾಧಿಕಾರಿಗಳು, ಐವರು ಸ್ವೀಪ್ ನೋಡಲ್ ಅಧಿಕಾರಿಗಳು, ತಲಾ ನಾಲ್ವರು ಎಲೆಕ್ಟ್ರಾಲ್ ರಜಿಸ್ಟ್ರೇಶನ್ ಅಧಿಕಾರಿಗಳು ಮತ್ತು ಸಹಾಯಕ ಎಲೆಕ್ಟ್ರಾಲ್ ರಜಿಸ್ಟ್ರೇಶನ್ ಅಧಿಕಾರಿಗಳು, ನಾಲ್ವರು ಬೂತ್ ಲೇವಲ್ ಅಧಿಕಾರಿಗಳು, ನಾಲ್ವರು ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ಸ್ ಮತ್ತು ನಾಲ್ಕು ಎಲೆಕ್ಟ್ರಾಲ್ ಲಿಟ್ರಸಿ ಕ್ಲಬ್ ಪ್ರಶಸ್ತಿ ಭಾಜನವಾಗಿವೆ.
ವಿವರಕ್ಕಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ