Kannada NewsKarnataka NewsLatest

ಗ್ರಾಮೀಣ ಭಾಗದಲ್ಲಿ ಕೊರೋನಾ ಜಾಗ್ರತಿ ಮೂಡಿಸಿದ ಶಾಸಕಿ ಹೆಬ್ಬಾಳಕರ್

https://youtu.be/6RtZNVhdm1I

 

https://youtu.be/qP-13_RJ__A

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಕ್ಷೇತ್ರದ ಹಿಂಡಲಗಾ ಭಾಗದಲ್ಲಿ ಕೊರೋನಾ ವೈರಸ್ ಕುರಿತು ಜಾಗೃತಿ ಅಭಿಯಾನ ನಡೆಸಿದರು. ಇದೇ ವೇಳೆ ಗ್ರಾಮದಲ್ಲಿ ಔಷಧ ಸಿಂಪಡಿಸಿ ತಿಳಿವಳಿಕೆ ಮೂಡಿಸಿದರು.
ಕಾರ್ಯಕರ್ತರು ಹಾಗೂ ಅಧಿಕಾರಿಗಳ ಜೊತೆ ಗ್ರಾಮಕ್ಕೆ ತೆರಳಿದ ಹೆಬ್ಬಾಳಕರ್, ಗ್ರಾಮದಲ್ಲೆಲ್ಲ ಸ್ವತಃ ಔಷಧಗಳನ್ನು ಸಿಂಪಡಿಸಿದರು. ಜೊತೆಗೆ ಗ್ರಾಮಸ್ಥರಿಗೆ ಕೊರೋನಾ ಕುರಿತು ಭಯ ಬಡ, ಆದರೆ ಜಾಗ್ರತೆ ಇರಲಿ ಎಂದು ತಿಳಿವಳಿಕೆ ನೀಡಿದರು.
ಪ್ರಧಾನ ನರೇಂದ್ರ ಮೋದಿ ತಿಳಿಸಿರುವಂತೆ ನಾವೆಲ್ಲ 21 ದಿನ ಮನೆಯಲ್ಲೇ ಇದ್ದು ಕೊರೋನಾ ಹರಡದಂತೆ ಎಚ್ಚರ ವಹಿಸೋಣ. ಅಧಿಕಾರಿಗಳು, ಜನಪ್ರತಿನಿಧಿಗಳು ಎಲ್ಲರೂ ತಮ್ಮ ತಮ್ಮ ಕೈಲಾದ ರೀತಿಯಲ್ಲಿ ಕೊರೋನಾ ಹರಡದಂತೆ ಕ್ರಮ ತಗೆದುಕೊಳ್ಳುತ್ತಿದ್ದಾರೆ. ಒಮ್ಮೆ ಕೈ ಮೀರಿದರೆ ನಿಯಂತ್ರಿಸುವುದು ಸುಲಭವಲ್ಲ. ಹಾಗಾಗಿ ಜನರು ಅನವಶ್ಯಕವಾಗಿ ಹೊರಗೆ ಹೋಗಬಾರದು ಎಂದು ಲಕ್ಷ್ಮಿ ಹೆಬ್ಬಾಳಕರ್ ವಿನಂತಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button