ಕೆಎಲ್ಎಸ್ ಜಿಐಟಿಯಲ್ಲಿ “ಇಂಜಿನಿಯರಿಂಗ್ ಕೋರ್ಸ್” ಕುರಿತ ಅರಿವು ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು 25 ಜೂನ್ 2023 ರಂದು ಬೆಳಗ್ಗೆ 11 ಗಂಟೆಗೆ ಸಿಲ್ವರ್ ಜುಬಿಲಿ ಆಡಿಟೋರಿಯಂನಲ್ಲಿ “ಇಂಜಿನಿಯರಿಂಗ್ ಕೋರ್ಸ್” ಕುರಿತ ಜಾಗೃತಿ ಕಾರ್ಯಕ್ರಮವನ್ನು ನಡೆಸಲಿದೆ.
ಸಿಇಟಿ ಮತ್ತು ಕಾಮೆಡ್-ಕೆಯ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳು, ಆನ್‌ಲೈನ್ ಸೀಟು ಆಯ್ಕೆ, ಸೂಕ್ತ ಇಂಜಿನಿಯರಿಂಗ್ ಕೋರ್ಸ್, ಸಂಸ್ಥೆಯ ಆಯ್ಕೆ ಕುರಿತು ಅರಿವು ಮೂಡಿಸಲು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಗೆ ಇದು ಉತ್ತಮ ವೇದಿಕೆಯನ್ನು ಕೊಡಲಿದೆ.
ಕೆಸಿಇಟಿ ಮಾಜಿ ನೋಡಲ್ ಅಧಿಕಾರಿ, ಸಹಾಯವಾಣಿ ಕೇಂದ್ರ, ಬೆಳಗಾವಿಯ ಪ್ರಾ. ರಾಜು ಬಸಣ್ಣವರ್ , , ಇವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದು, ಅವರು ನೀಡುವ ಉಪಯುಕ್ತ ಸಲಹೆಗಳನ್ನು ಪಡೆದುಕೊಳ್ಳಲು ವಿದ್ಯಾರ್ಥಿ ಹಾಗೂ ಪೋಷಕರನ್ನು ಕೋರಲಾಗಿದೆ. ಕೆಎಲ್ಎಸ್ ಜಿಐಟಿ ಪ್ರಾಚಾರ್ಯ ಪ್ರೊ ಡಿ.ಎ.ಕುಲಕರ್ಣಿ , ಹಾಗೂ ಜಿಐಟಿ ಛೇರ್ಮನ್ ರಾಜೇಂದ್ರ ಬೆಳಗಾಂವಕರ್ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಜಿಐಟಿ ಕ್ಯಾಂಪಸ್‌ಗೆ ತಲುಪಲು ಬೆಳಗ್ಗೆ 10 ಗಂಟೆಗೆ, ಬೆಳಗಾವಿ ಸಿಟಿ ಬಸ್ ನಿಲ್ದಾಣದಿಂದ ಕಾಲೇಜು ಬಸ್ ಸೌಲಭ್ಯವನ್ನು ಮಾಡಲಾಗಿದೆ. ಎಲ್ಲ ಆಕಾಂಕ್ಷಿ ವಿದ್ಯಾರ್ಥಿ ಹಾಗೂ ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ