Kannada NewsKarnataka NewsLatest

*ಪತ್ನಿಯ ಪ್ರಿಯಕರನ ಕತ್ತು ಸೀಳಿ ರಕ್ತ ಹೀರಿದ ಪತಿ; ಭೀಬತ್ಸ್ಯ ಕೃತ್ಯದ ವಿಡಿಯೋ ವೈರಲ್*

ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿಯೊಬ್ಬ ಆಕೆಯ ಪ್ರಿಯಕರನ ಕತ್ತು ಸೀಳಿ ಬಳಿಕ ಆತನ ಕತ್ತಿನ ರಕ್ತವನ್ನು ಹೀರಿದ ಭೀಬತ್ಸ್ಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಸಿದ್ದೇಪಲ್ಲಿ ಕ್ರಾಸ್ ಬಳಿ ನಡೆದಿದೆ.

ಬಟ್ಲಹಳ್ಳಿ ನಿವಾಸಿ ವಿಜಯ್ ಕೊಲೆ ಆರೋಪಿ. ಚೇಳೂರು ತಾಲೂಕಿನ ಮಾಂಡೇಪಲ್ಲಿ ನಿವಾಸಿ ಮಾರೇಶ್ ಹಲ್ಲೆಗೊಳಗಾದ ವ್ಯಕ್ತಿ.

Home add -Advt

ವಿಜಯ್ ಪತ್ನಿ ಮಾಲಾ ಜೊತೆ ಮಾರೇಶ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಆರೋಪ ಹಿನ್ನೆಲೆಯಲ್ಲಿ ವಿಜಯ್, ಮಾರೇಶ್ ನನ್ನು ಸಿದ್ದೇಪಲ್ಲಿ ಕ್ರಾಸ್ ಬಳಿ ಕರೆಸಿಕೊಂಡು ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಬಳಿಕ ಆತನ ಕತ್ತನ್ನು ಸೀಳಿ ರಕ್ತ ಕುಡಿದಿದ್ದಾನೆ. ಈ ವಿಲಕ್ಷಣ ವಿಡಿಯೋವನ್ನು ಇನ್ನೊಬ್ಬನ ಬಳಿ ಮೊಬೈಲ್ ನಲ್ಲಿ ಸೆರೆಹಿಡಿಯುವಂತೆ ಹೇಳಿ ದೃಶ್ಯ ಸೆರೆ ಹಿಡಿದಿದ್ದು, ಬಳಿಕ ವಿಜಯ್ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾನೆ.

ಹಲ್ಲೆಗೊಳಗಾದ ಮಾರೇಶ್ ಆಸ್ಪತ್ರೆಗೆ ದಾಖಲಾಗಿದ್ದು, ಆರೋಪಿ ವಿಜಯ್ ನನ್ನು ಕೆಂಚಾರ್ಲಹಳ್ಳಿ ಪೊಲಿಸರು ಬಂಧಿಸಿದ್ದಾರೆ.


Related Articles

Back to top button