Karnataka News

*ಗಾಳಿಪಟ ಹಾರಿಸುವಾಗ ಮನೆಮೇಲಿಂದ ಬಿದ್ದು ಬಾಲಕ ದುರ್ಮರ*

ಪ್ರಗತಿವಾಹಿನಿ ಸುದ್ದಿ: ಗಾಳಿಪಟ ಹಾರಿಸುವಾಗ ಅನೇಕ ದುರ್ಘಟನೆಗಳು ಸಂಭವಿಸುತ್ತಲೆ ಇರುತ್ತೆ. ಗಾಳಿಪಟದ ದಾರದಿಂದ ವಾಹನ ಸವಾರರಿಗೆ, ಪಾದಚಾರಿಗಳಿಗೆ ಗಾಯವಾಗುತ್ತೆ. ಆದರೆ ಇಲ್ಲಿ ಮನೆಯ ಮಾಳಿಗೆಯ ಮೇಲೆ ನಿಂತುಕೊಂಡು ಗಾಳಿಪಟ ಹಾರಿಸುತ್ತಿದ್ದ ಬಾಲಕನೋರ್ವ ಆಯತಪ್ಪಿ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.

ಈ ಘಟನೆಯು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ನವನಿಹಾಳ ಖೀರುನಾಯಕ ತಾಂಡಾದಲ್ಲಿ ನಡೆದಿದೆ. ಮೃತ ಬಾಲಕ ಆದಿತ್ಯ ಗಜಾನಂದ ಜಾಧವ (15) ಕಮಲಾಪುರ ಪಟ್ಟಣದ ಶಾರದಾದೇವಿ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಶಾಲೆ ಮುಗಿಸಿ ಮನೆಗೆ ಬಂದು ಮನೆಯ ಮಾಳಿಗೆಯ ಮೇಲೆ ಹತ್ತಿ ಗಾಳಿಪಟ ಹಾರಿಸುತ್ತಿದ್ದ.

ಈ ವೇಳೆ ಆಯತಪ್ಪಿ ಮೆಟ್ಟಿಲ ಮೇಲಿಂದ ರಭಸವಾಗಿ ನೆಲಕ್ಕೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದ. ಕೂಡಲೇ ಬಾಲಕನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button