Belagavi NewsBelgaum NewsKannada NewsKarnataka NewsLatest
ಅಯೋಧ್ಯೆ ಆಮಂತ್ರಣ: ವಿಶೇಷ ವಿಮಾನದ ಮೂಲಕ ತೆರಳಿದ ಡಾ.ಪ್ರಭಾಕರ ಕೋರೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರಿಗೆ ಅಯೋಧ್ಯೆಯ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಬಂದಿದೆ.

ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವರು ಭಾನುವಾರ ಮುಂಜಾನೆ ಅಯೋಧ್ಯೆಗೆ ತೆರಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಡಾ.ಪ್ರಭಾಕರ ಕೋರೆ ನೇತೃತ್ವದಲ್ಲಿ 8 ಜನರ ತಂಡ ವಿಶೇಷ ವಿಮಾನದ ಮೂಲಕ ಅಯೋಧ್ಯೆಗೆ ತೆರಳಿತು.

ಜೀವನದಲ್ಲಿ ಇಂತಹ ಅವಕಾಶ ಸಿಗುವುದು ಅಪರೂಪ. ಅವಕಾಶ ಬಳಸಿಕೊಂಡು ಅಯೋಧ್ಯೆಯಲ್ಲಿ ರಾಮಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಕಣ್ತುಂಬಿ ನೋಡಿಕೊಂಡು ಬರುವುದಕ್ಕಾಗಿ ತೆರಳುತ್ತಿದ್ದೇನೆ ಎಂದು ಡಾ.ಪ್ರಭಾಕರ ಕೋರೆ ಪ್ರಗತಿವಾಹಿನಿಗೆ ತಿಳಿಸಿದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಸ್ವರ್ಣ ಗ್ರುಪ್ ಚೇರಮನ್ ವಿ.ಎಸ್.ವಿ ಪ್ರಸಾದ ಸೇರಿದಂತೆ 8 ಜನರು ಅಯೋಧ್ಯೆಗೆ ತೆರಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ