Kannada NewsKarnataka NewsLatest

*ಪತಿಯನ್ನು ಹುಡುಕಿಕೊಡುವಂತೆ ಪತ್ನಿಯ ದೂರು; ಹೆಂಡತಿ ನಾಪತ್ತೆ ಎಂದು ಗಂಡನ ಕಂಪ್ಲೇಂಟ್; ಏನಿದು ಪ್ರಕರಣ?*

ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧದ ಪ್ರಕರಣವೊಂದು ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಹಾಗೂ ಪತ್ನಿಯನ್ನು ಹುಡುಕಿಕೊಡುವಂತೆ ಪತಿ ಒಂದೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ಪತಿ ಹಾಗೂ ಪತ್ನಿ ಇಬ್ಬರೂ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿದ್ದಾರೆ. ಸುಮಯ್ಯಾ ಬಾನು ಹಾಗೂ ವಸೀಂ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಮೂರು ವರ್ಷದ ಹೆಣ್ಣುಮಗುವಿದೆ. ಆದರೆ ಇತ್ತೀಚೆಗೆ ವಸಿಂ ದಿಲ್ ಷಾದ್ ಎಂಬುವವರ ಹಿಂದೆ ಬಿದ್ದಿದ್ದಾನೆ. ಪತಿ ವಸಿಂ ದಿಲ್ ಷಾದ್ ಜೊತೆ ಹೋಟೆಲ್ ನಲ್ಲಿ ತಂಗಿದ್ದಾಗ ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.

Home add -Advt

ಈ ವೇಳೆ ದಿಲ್ ಷಾದ್ ನನ್ನು ಹಿಡಿದು ಸುಮಯ್ಯಾ ಬಾನು ಹಿಗ್ಗಾ ಮುಗ್ಗಾ ಥಳಿಸಿದ್ದಳು. ಅಸಲಿಗೆ ದಿಲ್ ಷಾದ್ ಕೂಡ ಅದಾಗಲೇ ಒಂದು ಮದುವೆಯಾಗಿದ್ದಳು. ತನ್ನ ಪತಿ ಜೊತೆ ದಿಲ್ ಷಾದ್ ಅಕ್ರಮ ಸಂಬಂಧ ಹೊಂದಿರುವುದಾಗಿ ಸುಮಯ್ಯಾ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ಇದೀಗ ವಸಿಂ ಹಾಗೂ ದಿಲ್ ಷಾದ್ ಇಬ್ಬರೂ ರಾತ್ರೋ ರಾತ್ರಿ ಓಡಿ ಹೋಗಿದ್ದು, ತನ್ನ ಪತಿಯನ್ನು ಹುಡುಕಿಕೊಡುವಂತೆ ಸುಮಯ್ಯಾ ಹಾಗೂ ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ದಿಲ್ ಷಾದ್ ಪತಿ ನಯಿಂ ಇಬ್ಬರೂ ಪುಟ್ಟೇನಹಳ್ಳಿ ಠಾಣೆ ಮೆಟ್ಟಿಲೇರಿದ್ದಾರೆ.


Related Articles

Back to top button