Cancer Hospital 2
Laxmi Tai Society2
Beereshwara add32

*ಅಯೋಧ್ಯೆಯ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಭಾಕರ ಕೋರೆ*

Anvekar 3

ಪ್ರಗತಿವಾಹಿನಿ ಸುದ್ದಿ: ಕೆಎಲ್ಇ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ ಅವರು ಅಯೋಧ್ಯೆಯ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಅವರು ಮಾತನಾಡಿ ಪ್ರತಿಯೊಬ್ಬ ಹಿಂದೂ ಕೂಡ ಅಭಿಮಾನ ಪಡಬೇಕು. ಶ್ರೀ ರಾಮ ನಮ್ಮ ಸಂಸ್ಕೃತಿಯ ಅಸ್ಮಿತೆ. 500 ವರ್ಷಗಳ ಹಿಂದುಗಳ ತಪಸ್ಸು ಇಂದು ಫಲಿಸಿದೆ. ಭವ್ಯವಾದ ರಾಮಮಂದಿರವನ್ನು ಕಣ್ಣು ತುಂಬಿಕೊಳ್ಳುವುದೇ ಒಂದು ಅಮೃತಗಳಿಗೆ. ಭಾರತ ದರ್ಶನವನ್ನು ಇಲ್ಲಿ ಕಾಣಬಹುದು. ಅಸಂಖ್ಯಾ ಹಿರಿಯರ ಹೋರಾಟದ ತ್ಯಾಗದ ಪ್ರತಿಫಲವಾಗಿ ಶ್ರೀ ರಾಮನ ಭಕ್ತಿಯೇ ಇಲ್ಲಿ ಮೈಯೆತ್ತಿ ನಿಂತು ಕೊಂಡಿದೆ ಎಂದು ಅವರು ಹೇಳಿದರು.

Emergency Service

ಇಂತಹ ಪವಿತ್ರ ಕ್ಷಣದಲ್ಲಿ ಪಾಲ್ಗೊಂಡಿರುವುದು ನನಗೆ ಅತ್ಯಂತ ಹೆಮ್ಮೆ ಹಾಗೂ ಸಂತೋಷ ಉಂಟು ಮಾಡಿದೆ. ಪ್ರತಿಯೊಬ್ಬ ಭಾರತೀಯನೂ ಕೂಡ ರಾಮನ ದರ್ಶನವನ್ನು ಪಡೆಯಬೇಕು. ನಮ್ಮ ಸನಾತನ ಸಂಸ್ಕೃತಿಯಲ್ಲಿ ಧರ್ಮ ಆಧ್ಯಾತ್ಮಗಳು ಬೆರೆತುಕೊಂಡಿವೆ. ರಾಮಾಯಣ ಅಂತಹ ಮೌಲ್ಯಗಳ ಒಂದು ದರ್ಶನವೆಂದು ಹೇಳಿದರು.

Gokak Jyotishi add 8-2
Bottom Add3
Bottom Ad 2

You cannot copy content of this page