*ರಾಷ್ಟ್ರೀಯ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಗೆ ಬೆಳಗಾವಿ ಅಮನ್ ಸುಣಗಾರ ಆಯ್ಕೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಪ್ರತಿಷ್ಠಿತ ಜೆಜಿಯ ಸಂಸ್ಥೆಯ ಜೈನ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಮನ್ ಅಭಿಜಿತ್ ಸುಣಗಾರ ಇತ್ತೀಚೆಗೆ (ಜುಲೈ 13 ರಿಂದ 16 ರ ವರೆಗೆ) ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಯಲ್ಲಿ ಭಾಗವಸಿ ಪ್ರಥಮ ಸ್ಥಾನ ಪಡೆದು, ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಎನ್ಆರ್ ಜೆ ರಾಜ್ಯ ಮಟ್ಟದ ಜೂನಿಯರ್ ಚಾಂಪಿಯನ್‌ಶಿಪ್ 2026 ಬೆಂಗಳೂರಿನ ಬಸವನಗುಡಿ ಅಕ್ವಾಟಿಕ್ ಸೆಂಟರ್‌ನಲ್ಲಿ ಜುರುಗಿತು. ಈ ಸರ್ಧೆಯಲ್ಲಿ ಭಾಗವಹಿಸಿದ ಅಮನ್ ಸುಣಗಾರ ಅವರು,100 ಮೀ ಬ್ಯಾಕ್‌ಸ್ಟ್ರೋಕ್ ಚಿನ್ನ, 200 ಮೀ ಬ್ಯಾಕ್‌ಸ್ಟ್ರೋಕ್ ಚಿನ್ನ, 50 ಮೀ ಬ್ಯಾಕ್‌ಸ್ಟ್ರೋಕ್ ಬೆಳ್ಳಿ, 50 ಮೀ ಫ್ರೀಸ್ಟೈಲ್ ಬೆಳ್ಳಿ, 4×100 ಮೆಡ್ಲೆ ರಿಲೇ ಬೆಳ್ಳಿ, 4×100 ಮೀ ಫ್ರೀಸ್ಟೈಲ್ ರಿಲೇ ಕಂಚು, 4×200 ಮೀ ಫ್ರೀಸ್ಟೈಲ್ ರಿಲೇ ಕಂಚು ಪದಗಳನ್ನು ಪಡೆದುಕೊಂಡಿದ್ದಾರೆ.
ಆಗಸ್ಟ್ 17 ರಿಂದ 24 ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್ ಈಜು ಸ್ಪರ್ಧೆಯಲ್ಲಿ ಅಮನ್ ಕರ್ನಾಟಕವನ್ನು ಪ್ರತಿನಿಧಿಸಲಿದ್ದು, ಜೆಜಿಐ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಸಿಬ್ಬಂದಿ, ವಿದ್ಯಾರ್ಥಿಗಳು, ಸ್ನೇಹ ಬಳಗ, ಕುಟುಂಬ ವರ್ಗ, ಕ್ರೀಡಾಪಟುಗಳು ಶುಭ ಹಾರೈಯಿಸಿದ್ದಾರೆ.
ಬೆಳಗಾವಿ ಜಿಲ್ಲಾ ಆಡಳಿತ ಇತ್ತೀಚೆಗೆ ಸುವರ್ಣ ವಿಧಾನ ಸೌಧದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಮನ್ ಸುಣಗಾರ ಅವರ ಸಾಧನೆಯನ್ನು ಪರಿಗಣಿಸಿ ಗೌರವಿಸಿ ಸನ್ಮಾನಿಸಿದೆ.



