*ಅಯೋಧ್ಯೆ ಪವಿತ್ರ ಆಮಂತ್ರಣ ಕಳಶಕ್ಕೆ ಸ್ವಾಮೀಜಿಗಳಿಂದ ಪೂಜೆ ಹಾಗೂ ಕಳಶ ವಿತರಣೆ*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ವಿಶ್ವ ಹಿಂದುಪರಿಷತ್ ಕಾರ್ಯಾಲಯ ಸಮರಸತಾಭವನದಲ್ಲಿ ಇರಿಸಲಾದ ಅಯೋಧ್ಯೆಯಿಂದ ಆಗಮಿಸಿರುವ ಪವಿತ್ರ ಆಮಂತ್ರಣ ಕಲಶಕ್ಕೆ ವಿವಿಧ ಮಠಾಧೀಶರು ಪೂಜೆ ಸಲ್ಲಿಸಿದರು.
ಕಳೆದ ಡಿ 8ರಂದು ಅಯೋಧ್ಯೆಯಿಂದ ಆಗಮಿಸಿದ್ದ ಈ ಪವಿತ್ರ ಮಂತ್ರಾಕ್ಷತೆ ಕಳಶವನ್ನು ಭಕ್ತಿಯಿಂದ ಸ್ವಾಗತಿಸಿ ಮೆರವಣಿಗೆ ಮೂಲಕ ವಿಹೆಚ್ ಪಿ ಕಾರ್ಯಾಲಯ ಸಮರಸತಾಭವನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪೂಜ್ಯರ ಸನ್ನಿದಾನದಲ್ಲಿ ಅಕ್ಷತಾ ಕಳಶಕ್ಕೆ ಪೂಜೆ ಸಲ್ಲಿಸಲಾಯಿತು.
ನಂತರ ಶ್ರೀಗಳು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಿನ ಸಂಯೊಜಕರಿಗೆ ಕಳಶ ವಿತರಿಸಿದರು. ಅಯೋಧ್ಯೆಯಲ್ಲಿ ಜನೇವರಿ 22ರಂದು ಶ್ರೀರಾಮನ ಪ್ರತಿಷ್ಠಾಪನೆ ನಡೆಯಲಿದ್ದು ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ 5ಲಕ್ಷ ಮನೆಗಳಿಗೆ ಜನೆವರಿ 1ರಿಂದ 15ರವರೆಗೆ ಅಭಿಯಾನದ ರೂಪದಲ್ಲಿ ಪವಿತ್ರ ಮಂತ್ರಾಕ್ಷತೆ ಮತ್ತು ಪ್ರಭು ಶ್ರೀರಾಮನ ಭಾವಚಿತ್ರ ಇರುವ ಆಮಂತ್ರಣ ಪತ್ರಿಕೆ ವಿತರಿಸಲಾಗುತ್ತದೆ.
ನಗರದ ಕಾರಂಜಿ ಮಠದ ಗುರುಸಿದ್ದ ಸ್ವಾಮಿಗಳು, ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಮುತ್ನಾಳದ ಶಿವಾಚಾರ್ಯ ಸ್ವಾಮೀಜಿ, ಮುಕ್ತಾನಂದ ಸ್ವಾಮೀಜಿ, ಅವರೊಳ್ಳಿಯ ಚೆನ್ನಬಸವ ದೇವರು ಸ್ವಾಮೀಜಿ, ಕಲ್ಮಠದ ಮಡಿವಾಳ ರಾಜಯೋಗೇಂದ್ರ ಸ್ವಾಮೀಜಿ, ನಾಗನಾಥ ಸಾವಾಮೀಜಿಯವರು, ಗಂಗಾಧರ ಸ್ವಾಮೀಜಿ ಸಾನ್ನಿಧ್ಯವಸಿದ್ದರು.
ವಿ ಎಚ್ ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ ಕದಮ್, ಜಿಲ್ಲಾ ಕಾರ್ಯದರ್ಶಿ ಆನಂದ ಕರಲಿಂಗಣ್ಣವರ, ಅಭಿಯಾನದ ವಿಭಾಗ ಸಂಯೋಜಕ ದತ್ತಾ ನಾಯ್ಕ,ವಿಭಾಗ ಬಜರಂಗದಳದ ಸಂಯೋಜಕ ಬಾವಕಣ್ಣ ಲೋಹಾರ, ಜಿಲ್ಲಾ ಸಂಯೋಜಕ ಬಿಟ್ಟಪ್ಪಾ ನಾಯ್ಕ, ವಿ ಎಚ್ ಪಿ ಜಿಲ್ಲಾ ಸಹಕಾರ್ಯದರ್ಶಿ ಗಣೇಶ ಚೌಗಲೆ, ಉಮೇಶ ಚಿಂಡಕ್, ಸಂತೋಷ ಮಾದಿಗ , ಆದಿನಾಥ ಗಾವಡೆ, ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್ಟ ಮುಂತಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ