
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಆಜಾನ್ ವಿಚಾರವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.
ಮಂಗಳೂರಿನ ಕಾವೂರು ಶಾಂತಿನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಈಶ್ವರಪ್ಪ ಭಾಷಣ ಮಾಡುತ್ತಿದ್ದ ವೇಳೆ ಮಸೀದಿಯಲ್ಲಿ ಆಜಾನ್ ಮೊಳಗಿದೆ. ಇದರಿಂದ ಸಿಡಿಮಿಡಿಗೊಂಡ ಈಶ್ವರಪ್ಪ, ನಾನು ಎಲ್ಲಿಗೆ ಹೋದರೂ ಇದೊಂದು ತಲೆ ನೋವು ಎಂದು ಕಿಡಿಕಾರಿದ್ದಾರೆ.
ಮೈಕ್ ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ಮೈಕ್ ಹಿಡ್ಕೊಂಡು ಮಾತ್ರ ಹೇಳಿದರೆ ಅವನಿಗೆ ಕೇಳೋದು ಕಿವುಡಾ ಅನ್ನುತ್ತೇವೆ. ಸುಪ್ರೀಂ ಕೋರ್ತ್ ಆದೇಶವಿದೆ ಇಂದಲ್ಲ ನಾಳೆ ಈ ಸಮಸ್ಯೆ ಇತ್ಯರ್ಥ ಆಗಲಿದೆ ಎಂದು ಗುಡುಗಿದ್ದಾರೆ.
ನಮ್ಮ ದೇವಸ್ಥಾನಗಳಲ್ಲಿಯೂ ಪೂಜೆ ಮಾಡುತ್ತೇವೆ. ಶ್ಲೋಕ, ಭಜನೆಗಳನ್ನು ಹೇಳುತ್ತೇವೆ. ಅವರಿಗಿಂತ ಹೆಚ್ಚು ಭಕ್ತಿ ನಮ್ಮಲ್ಲೂ ಇದೆ. ಪ್ರಪಂಚದ ಧರ್ಮವನ್ನು ಉಳಿಸುವ ದೇಶ ನಮ್ಮದು ಎಂದಿದ್ದಾರೆ.


