Kannada NewsKarnataka NewsLatest

3 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಜನಹಿತವೊಂದೇ ನನ್ನ ಧ್ಯೇಯವಾಗಿದ್ದು ರಾಜಕೀಯಕ್ಕಿಂತ ಹೆಚ್ಚಾಗಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಹೀಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಭೌತಿಕ ಅಭಿವೃದ್ಧಿ ಜನರಲ್ಲಿ ಮಾನಸಿಕ ನೆಮ್ಮದಿ ತಂದಿದೆ” ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ನಾವಗೆ ಗ್ರಾಮದಿಂದ ನಾವಗೆ ಕ್ರಾಸ್ (ಜಾಂಬೋಟಿ ಮುಖ್ಯ ಹೆದ್ದಾರಿ) ವರೆಗಿನ ರಸ್ತೆಯ ಅಭಿವೃದ್ಧಿ ಕಾರ್ಯಕ್ಕೆ ಇಂದು ಭೂಮಿಪೂಜೆ ನೆರವೇರಿಸುವ ಮೂಲಕ ಅವರು ಚಾಲನೆ ನೀಡಿದರು.

Home add -Advt

ಈ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ ಅವರು ಲೋಕೋಪಯೋಗಿ ಇಲಾಖೆಯ ವತಿಯಿಂದ 3ಕೋಟಿ ರೂ. ಮಂಜೂರು ಮಾಡಿಸಿದ್ದಾರೆ.

ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಗ್ರಾಮದ ಹಿರಿಯರು ಮಾರುತಿ ಹುರಕಡ್ಲಿ, ಸಾತೇರಿ ಕಮತಿ ಅಪ್ಪು ಪಾಟೀಲ, ಪರಶುರಾಮ ಶಹಾಪುರಕರ, ರಾಮಲಿಂಗ ಚಿಗರೆ, ಶಿಲ್ಪಾ ಕಮತಿ, ಮೋಹನ ರೆಡ್ಡಿ, ಸುಜಾತಾ ಕರ್ಲೇಕರ, ಮೇಘನಾ ಮೋಟೆಣಕಾರ, ಲಕ್ಷ್ಮೀ ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.

https://pragati.taskdun.com/union-minister-smriti-irani-to-belgaum-on-march-16-shiva-charitra-inauguration-ceremony/

https://pragati.taskdun.com/five-states-are-likely-to-experience-rain-in-the-next-five-days/
https://pragati.taskdun.com/a-new-opportunity-for-summer-travel-low-cost-india-nepal-astha-yatra-will-start-from-march-31/

Related Articles

Back to top button