ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಣ್ಣಗಾಗುತ್ತಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ 1.20 ಕೋಟಿ ವಿದ್ಯಾರ್ಥಿಗಳಲ್ಲಿ 500-600 ವಿದ್ಯಾರ್ಥಿನಿಯರಿಗೆ ಮಾತ್ರ ಸಮಸ್ಯೆ ಆಗಿದೆ. ಉಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯಾವುದೇ ಸಮಸ್ಯೆ ಆಗಿಲ್ಲ, ಉಳಿದವರೆಲ್ಲ ಸರಿಯಾದ ಕ್ರಮದಲ್ಲಿ ಶಾಲೆ ಕಾಲೇಜುಗಳಿಗೆ ಹೋಗುತ್ತಿರುವುದು ಸಂತಸದ ವಿಷಯ ಎಂದು ಹೇಳಿದ್ದಾರೆ.
ರಾಜ್ಯದ 11 ಶಾಲೆಗಳಲ್ಲಿ ವಿವಾದ ಪ್ರಾರಂಭವಾಗಿತ್ತು. ಪ್ರಸ್ತುತ 5 ಶಾಲೆಗಳಲ್ಲಿ ವಿವಾದ ತಣ್ಣಗಾಗಿದೆ. ಉಳಿದ ಶಾಲೆಗಳಲ್ಲೂ ಇನ್ನು ಕೆಲವೇ ದಿನಗಳಲ್ಲಿ ತಣ್ಣಗಾಗಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಮನದಟ್ಟು ಮಾಡಿಸಲಾಗುತ್ತಿದೆ ಎಂದರು.
ಹಿಂದು ಹೆಣ್ಮಕ್ಕಳು ಬಿಂದಿ ಇಟ್ಟುಕೊಂಡು ಬರುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ನಾಗೇಶ್, ಅಲಂಕಾರಕ್ಕೂ ಧಾರ್ಮಿಕ ಧಿರಿಸಿಗೂ ವ್ಯತ್ಯಾಸ ಇದೆ. ಹಿಂದು ಹೆಣ್ಮಕ್ಕಳಿಗೆ ಬಿಂದಿ ಇಟ್ಟು ಹೂ ಮುಡಿದು ಬರುವಂತೆ ಯಾರೂ ಕಡ್ಡಾಯ ಮಾಡಿಲ್ಲ ಎಂದರು.
ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿಗೆ ಮುಂದಾದ ಕಾಂಗ್ರೆಸ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ