ಅನ್ನಭಾಗ್ಯ ಯೋಜನೆ ಅಕ್ಕಿ ಕಡಿತಗೊಳಿಸುವುದಾಗಿ ತಿಳಿಸಿದ ಬಿಸಿ ಪಾಟೀಲ್

ಪ್ರಗತಿವಾಹಿನಿ ಸುದ್ದಿ; ಹಿರೆಕೇರೂರು: ಅನ್ನಭಾಗ್ಯ ಯೋಜನೆಯಲ್ಲಿ ಬಿಪಿಎಲ್​ ಕಾರ್ಡ್​ಗಳಿಗೆ ನೀಡುತ್ತಿರುವ 7 ಕೆಜಿ ಅಕ್ಕಿಯನ್ನು ಕಡಿತಗೊಳಿಸಿ, ಇನ್ಮುಂದೆ 5 ಕೆಜಿ ನೀಡಲಾಗುವುದು ಎಂದು ಸಚಿವ ಬಿಸಿ ಪಾಟೀಲ್​ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿ ಪಾಟೀಲ್, ಇನ್ಮುಂದೆ ಅನ್ನಭಾಗ್ಯ ಯೋಜನೆ ಅಡಿ 5 ಕೆಜಿ ಅಕ್ಕಿ ನೀಡಲಾಗುವುದು. ಉಳಿದ ಎರಡು ಕೆಜಿಗೆ ಜೋಳ ಅಥವಾ ರಾಗಿ ನೀಡಲಾಗುವುದು. ಕಾರಣ ಉತ್ತರ ಕರ್ನಾಟಕದ ಜನ ರೊಟ್ಟಿ ತಿನ್ನುತ್ತಾರೆ. ಹಳೆ ಮೈಸೂರಲ್ಲಿ ಮುದ್ದೆ ತಿನ್ನುತ್ತಾರೆ. ಹಾಗಾಗಿ 2 ಕೆಜಿ ಜೋಳ, ರಾಗಿ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ ಜೋಳ, ರಾಗಿಗೂ ಬೇಡಿಕೆ ಬರುತ್ತದೆ ಎಂದರು.

ಅನ್ನಭಾಗ್ಯ ಯೋಜನೆಗೆ ಈ ಬಾರೀ ಬಜೆಟ್​ನಲ್ಲಿ ರೂ. 1,234 ಕೋಟಿ ರೂ ಕಡಿತ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಈ ಧಾನ್ಯಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ.

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರ ಕುರಿತು ಅಧಿವೇಶನ ಮುಗಿದ ಬಳಿಕ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button