Latest

ಬಿ.ಎಲ್.ಸಂತೋಷ್ ಜೊತೆ ಅರವಿಂದ್ ಬೆಲ್ಲದ್ ಚರ್ಚೆ

ಪ್ರಗತಿವಾಹಿನಿ ಸುದ್ದಿ; ನವದೆಹಲಿ:  ದೆಹಲಿಗೆ ತೆರಳಿರುವ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿದ್ದಾರೆ.

ಇನ್ನೂ ಎರಡು ವರ್ಷ ನಾನೇ ಸಿಎಂ ಎಂಬ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ನಿನ್ನೆಯೇ ದೆಹಲಿಗೆ ದೌದಾಯಿಸಿರುವ ಅರವಿಂದ್ ಬೆಲ್ಲದ್, ತಡರಾತ್ರಿ ಬಿ.ಎಲ್.ಸಂತೋಷ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಸಿಎಂ ಬದಲಾವಣೆ, ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಸುಮಾರು ಎರಡು ಗಂಟೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಬಿ.ಎಲ್.ಸಂತೋಷ್ ಭೇಟಿ ಬಳಿಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿಗೂ ಯತ್ನಿಸಿದ್ದಾರೆ.  ಒಟ್ಟಾರೆ ಜೂನ್ 16ರಂದು ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದು, ಅದಕ್ಕೂ ಮುನ್ನವೇ ಶಾಸಕ ಬೆಲ್ಲದ್ ಅವರ ದೆಹಲಿ ಪ್ರಯಾಣ, ಬಿ.ಎಲ್.ಸಂತೋಷ್ ಭೇಟಿ ಚರ್ಚೆಗೆ ಕಾರಣವಾಗಿದೆ.

ಅರವಿಂದ್ ಬೆಲ್ಲದ್ ಮುಂದಿನ ಸಿಎಂ! – ಬೆಂಬಲಿಗರ ಪೋಸ್ಟ್

Home add -Advt

Related Articles

Back to top button