
ಪ್ರಗತಿವಾಹಿನಿ ಸುದ್ದಿ; ತೆಲಂಗಾಣ: ಶಾಸಕರ ಖರೀದಿಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮೂವರಿಗೆ ಎಸ್ ಐಟಿ ಅಧಿಕಾರಿಗಳು ಲುಕ್ ಔಟ್ ನೋಟೀಸ್ ಜಾರಿ ಮಾಡಿದ್ದಾರೆ.
ತೆಲಂಗಾಣದಲ್ಲಿ ಟಿ ಆರ್ ಎಸ್ ಶಾಕರರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆಯಲು 100 ಕೋಟಿ ರೂಪಾಯಿ ಆಮಿಷ ವೊಡ್ದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 21ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ ಐ ಟಿ ಬಿ.ಎಲ್. ಸಂತೋಷ್, ತುಷಾರ್ ವೆಲ್ಲಪಲ್ಲಿ ಹಾಗೂ ಜಗ್ಗು ಸ್ವಾಮಿ ಅವರಿಗೆ ನೋಟೀಸ್ ನೀಡಿತ್ತು. ಆದರೆ ನ.21ರಂದು ಮೂವರು ವಿಚಾರಣೆಗೆ ಹಜರಾಗದೇ ಗೈರಾಗಿದ್ದರು.
ಈ ಹಿನ್ನೆಲೆಯಲ್ಲಿ ಇದೀಗ ಎಸ್ ಐಟಿ ಬಿ.ಎಲ್.ಸಂತೋಷ್ ಹಾಗೂ ಇನ್ನಿಬ್ಬರಿಗೆ ಲುಕ್ ಔಟ್ ನೋಟೀಸ್ ಜಾರಿ ಮಾಡಿದೆ. ಟಿ ಆರ್ ಎಸ್ ಶಾಸಕರನ್ನು ಆಪರೇಷನ್ ಕಮಲದ ಮೂಲಕ ಖರೀದಿಗೆ ಬಿಜೆಪಿ ಯತ್ನಿಸಿದ್ದು, ಪ್ರಕರಣದಲ್ಲಿ ಪ್ರಮುಖವಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಹೆಸರು ಕೇಳಿಬಂದಿತ್ತು. ಈ ನಿಟ್ಟಿನಲ್ಲಿ ಎಸ್ ಐ ಟಿ ತನಿಖೆ ಚುರುಕುಗೊಳಿಸಿದೆ.
ಗರ್ಭಿಣಿ ಪತ್ನಿಯನ್ನೇ ಹತ್ಯೆಗೈದ ಪತಿ
https://pragati.taskdun.com/pregnant-ladymurdermandavanagere/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ