Latest

ಅವರಿಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ; ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬಿ.ಎಲ್.ಸಂತೋಷ್

ಪ್ರಗತಿವಾಹಿನಿ ಸುದ್ದಿ; ಉಡುಪಿ: ಆರ್.ಎಸ್.ಎಸ್ ಬಗ್ಗೆ ವಾಗ್ದಾಳಿ ನಡೆಸುತ್ತಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್, ಸಿದ್ದರಾಮಯ್ಯ ಈಗಲೇ ಕಸದ ಬುಟ್ಟಿಯಲ್ಲಿದ್ದಾರೆ. ಮುಂದೆ ದೊಡ್ಡ ಕಸದ ಬುಟ್ಟಿಗೆ ಹೋಗುತ್ತಾರೆ ಅವರ ಮಾತಿಗೆ ಉತ್ತರ ಕೊಡಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ನಡೆದ ಶಕ್ತಿಕೇಂದ್ರಗಳ ಸಮಾವೇಶದಲ್ಲಿ ಮಾತನಾಡಿದ ಬಿ.ಎಲ್.ಸಂತೋಷ್, ಸಿದ್ದರಾಮಯ್ಯ ಅವರಿಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ. ಜನ ಬಿಜೆಪಿಗೆ ಮತ ಕೊಟ್ಟಿದ್ದು ಅಭಿವೃದ್ಧಿ ವಿಚಾರಕ್ಕೆ ಹೊರತು ಪ್ರತಿ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಪ್ರತಿಕ್ರಿಯೆಗೆ ಉತ್ತರಿಸಬೇಕೆಂದಲ್ಲ ಎಂದರು.

ಸಾವರ್ಕರ್ ಹೆಸರನ್ನು ಮೇಲ್ಸೇತುವೆಗೆ ಇಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಬದುಕಿಗೆ ಬೆಂಕಿ ಬಿದ್ದಂತೆ ಆಡಿದರು. ದೇಶಕ್ಕಾಗಿ ಬಿಜೆಪಿಯ ಯಾವ ಮುಖಂಡರು ಬಲಿದಾನ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಈ ಸಾಲಿನಲ್ಲಿ ಬರುವ ಮೊದಲ ಹೆಸರು ಶ್ಯಾಮ್ ಪ್ರಸಾದ್ ಮುಖರ್ಜಿಯವರದ್ದು. ಶ್ಯಾಮ್ ಪ್ರಸಾದ್ ಯಾರು ಎಂಬುದನ್ನು ಸಿದ್ದರಾಮಯ್ಯ ಒಮ್ಮೆ ಶಾಂತವಾಗಿ ಮನೆಯಲ್ಲಿ ಕುಳಿತು ಯೋಚಿಸಲಿ ಎಂದು ಹೇಳಿದರು.

ಸಿದ್ದರಾಮಯ್ಯ ನಾಲಿಗೆಗೆ ಲಂಗು, ಲಗಾಮು, ಸಂಸ್ಕಾರವಿಲ್ಲ, ಮೂರು ಇಲ್ಲದಿರುವುದರಿಂದ ಹಾದಿಬೀದಿಯಲ್ಲಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಗುಡುಗಿದರು.

ವಿಧಾನಪರಿಷತ್ ರದ್ದುಗೊಳಿಸುವ ಸಮಯ ಬಂದಿದೆಯೇ? ಎಂದು ಕಾರ್ಯಕರ್ತರೊಬ್ಬರು ನನ್ನ ಕೇಳಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಈ ಪ್ರಶ್ನೆ ಉದ್ಭವಿಸಲ್ಲ. ಮತ ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಯೊಬ್ಬರಿಗೆ ಇರಬೇಕಾದ ಅತಿ ದೊಡ್ಡ ಗುಣ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಶೇ.99ರಷ್ಟು ನಾವು ಮಾರಾಟಕ್ಕಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಿದೆ ಎಂದರು.
ಬೆಳಗಾವಿ: ಸೋಲಿನ ಬಗ್ಗೆ ವರದಿ ತರಿಸಿ ತನಿಖೆ; ಬಳಿಕ ಮುಂದಿನ ಕ್ರಮ ಎಂದ ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button