Latest

ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಆದೇಶ

ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ಮೊದಲ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ನಿಯೋಜಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ 6.15ಕ್ಕೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ರಾಜಭವನದಲ್ಲಿ ಎಲ್ಲ ಸಿದ್ಧತೆಗಳು ನಡೆದಿವೆ.

ಅದಕ್ಕೂ ಮುನ್ನ 5 ಗಂಟೆಗೆ ಅವರು ಭಾರತೀಯ ಜನತಾಪಾರ್ಟಿಯ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಕೂಡ ತಯಾರಿ ನಡೆದಿದೆ.

Home add -Advt

ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಒಂದು ಮಹತ್ವದ ಆದೇಶ ಹೊರಡಿಸಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರ ಮೂಲಕ ಎಲ್ಲ ಜಿಲ್ಲೆಗಳಿಗೆ ಆದೇಶ ರವಾನೆಯಾಗಿದೆ. ಇದು ಅಧಿಕಾರಿಗಳ ವಲಯದಲ್ಲಿ ಸಂಚಲನ ಮೂಡಿಸಿದ್ದಲ್ಲದೆ ಹಿಂದಿನ ಮೈತ್ರಿ ಸರಕಾರದ ಸಚಿವರು, ಮೈತ್ರಿ ಪಕ್ಷಗಳ ಶಾಸಕರುಗಳಿಗೆ ಶಾಕ್ ನೀಡಿದೆ.

ಏನಿದು ಆದೇಶ?

ಮೈತ್ರಿ ಸರಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂದು ಜುಲೈ 2ನೇ ವಾರದಲ್ಲಿ ಗೊತ್ತಾಗತೊಡಗಿದೆ. ಸರಕಾರ ಉಳಿಸಿಕೊಳ್ಳಲು ಎರಡೂ ಪಕ್ಷಗಳು ಎಷ್ಟೇ ಪ್ರಯತ್ನ ಮಾಡಿದರೂ ಸರಕಾರ ಹೊಗುವುದು ಖಚಿತ ಎನ್ನುವುದು ಅವರಿಗೆ ಗೊತ್ತಾಗಿತ್ತು. ಆದರೂ ವಿಶ್ವಾಸಮತ ಯಾಚನೆಯನ್ನು ಆದಷ್ಟು ಮುಂದೂಡುವ ಮೂಲಕ ಒಂದುವಾರಕ್ಕೂ ಹೆಚ್ಚು ಕಾಲ ಸರಕಾರ ಉಳಿದುಕೊಂಡಿತ್ತು.

ಈ ಅವಧಿಯಲ್ಲಿ ಸರಕಾರ ಸಾಕಷ್ಟು ವರ್ಗಾವಣೆಗಳನ್ನು ಮಾಡಿತ್ತು. ಹಲವಾರು ಅಧಿಕಾರಿಗಳಿಗೆ ಪ್ರಮೋಶನ್ ಗಳನ್ನು ನೀಡಿತ್ತು. ಜೊತೆಗೆ ಹಲವಾರು ಹೊಸ ಕಾಮಗಾರಿಗಳಿಗೆ ಅನುಮೋದನೆ ನೀಡಿತ್ತು.

ಇದೀಗ ನಿಯೋಜಿತ ಮುಖ್ಯಮಂತ್ರಿ ಯಡಿಯೂರಪ್ಪ ಆದೋಶವೊಂದನ್ನು ಹೊರಡಿಸಿ, ಜುಲೈ ತಿಂಗಳಲ್ಲಿ ಮಂಜೂರಾಗಿರುವ ಎಲ್ಲ ಹೊಸ ಕಾಮಗಾರಿಗಳ ಆದೇಶಗಳನ್ನು ತಡೆಹಿಡಿಯುವಂತೆ ಸೂಚಿಸಿದ್ದಾರೆ. ಹಾಗೆಯೆ ಜುಲೈ ತಿಂಗಳಲ್ಲಿ ಮಾಡಲಾಗಿರುವ, ಜಾರಿಯಾಗದ ವರ್ಗಾವಣೆ ಆದೇಶಗಳನ್ನೂ ತಡೆಹಿಡಿಯಲು ಸೂಚಿಸಿದ್ದಾರೆ.

ಮುಖ್ಯಕಾರ್ಯದರ್ಶಿ ವಿಜಯ ಭಾಸ್ಕರ್ ಅವರಿಗೆ ಯಡಿಯೂರಪ್ಪ ಈ ಸೂಚನೆ ನೀಡಿದ್ದು, ಅದನ್ನು ಎಲ್ಲ ಇಲಾಖೆಗಳ ಅಧೀನ ಅಧಿಕಾರಿಗಳಿಗೆ ರವಾನಿಸಲಾಗಿದೆ.  ಮುಂದಿನ ಪರಿಶೀಲನೆವರೆಗೆ ಎಲ್ಲ ಕಾಮಗಾರಿಗಳನ್ನು ತಡೆಹಿಡಿಯುವಂತೆ ಸೂಚಿಸಲಾಗಿದೆ.

ಇದರಿಂದಾಗಿ ಹಿಂದಿನ ಸರಕಾರ ತರಾತುರಿಯಲ್ಲಿ ಮಂಜೂರು ಮಾಡಿರುವ ಸಾವಿರಾರು ಕೋಟಿ ರೂ. ಕಾಮಗಾರಿಗಳು ಹಳ್ಳ ಹಿಡಿದಂತಾಗಿದೆ.

 ಪದೋನ್ನತಿ ಕಥೆ ಏನು?

ಇದೀಗ ಕಳೆದ ಜುಲೈ ತಿಂಗಳಲ್ಲಿ ಮಾಡಲಾಗಿರುವ ಅಧಿಕಾರಿ, ನೌಕರರ  ಪ್ರಮೋಶನ್ ಕಥೆ ಏನು ಎನ್ನುವ ಪ್ರಶ್ನೆ ಮೂಡಿದೆ. ಇನ್ನೇನು ಸರಕಾರ ಅಧಿಕಾರ ಕಳೆದುಕೊಳ್ಳುತ್ತದೆ ಎನ್ನುವ ಸಂದರ್ಭದಲ್ಲಿ ಸಾವಿರಾರು ಟ್ರಾನ್ಸ್ಫರ್ ಮತ್ತು ಪ್ರಮೋಶನ್ ನೀಡಲಾಗಿದೆ.

ಕೇವಲ ಲೋಕೋಪಯೋಗಿ ಇಲಾಖೆಯೊಂದರಲ್ಲೇ 800ಕ್ಕೂ ಹೆಚ್ಚು ಅಧಿಕಾರಿಗಳ ವರ್ಗಾವಣೆ ಮತ್ತು ಪ್ರಮೋಶನ್ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈಗ ಈ  ಪ್ರಮೋಶನ್ ಗಳಿಗೂ ತಡೆ ನೀಡಲಾಗುತ್ತದೆಯೋ ಎನ್ನುವ ಪ್ರಶ್ನೆ ಮೂಡಿದೆ.

 

 

Related Articles

Back to top button