Kannada NewsKarnataka NewsLatestPolitics

*ಹೆಲಿಕಾಪ್ಟರ್ ಹತ್ತುವಾಗ ಯಡಿಯೂರಪ್ಪಗೆ ಉಳುಕಿದ ಕಾಲು; ನೋವಿನಿಂದ ಹೆಜ್ಜೆ ಇಡಲಾಗದೇ ಕಷ್ಟಪಟ್ಟ ಮಾಜಿ ಸಿಎಂ*

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೆಲಿಕಾಪ್ಟರ್ ಹತ್ತುವಾಗ ಕಾಲು ಉಳುಕಿರುವ ಘಟನೆ ನಡೆದಿದೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಶಿಕಾರಿಪುರದಿಂದ ರಾಯಚೂರಿಗೆ ತೆರಳುತ್ತಿದ್ದರು. ಈ ವೇಳೆ ಶಿಕಾರಿಪುರದಲ್ಲಿ ಹೆಲಿಕಾಪ್ಟರ್ ಹತ್ತುವಾಗ ಅಕಸ್ಮಾತ್ ಅಗಿ ಕಾಲು ಉಳುಕಿದೆ. ಆದಾಗ್ಯೂ ಪ್ರಯಾಣ ಮುಂದುವರೆಸಿದ ಯಡಿಯೂರಪ್ಪ ಹೆಲಿಕಾಪ್ಟರ್ ಹತ್ತಿದ್ದಾರೆ. ಆದರೆ ರಾಯಚೂರಿನಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆದಾಗ ಹೆಲಿಕಾಪ್ಟರ್ ಮೆಟ್ಟಿಲುಗಳನ್ನು ಇಳಿಯುವಾಗ ನೋವಿನಿಂದ ಪರದಾಡುವಂತಾಯಿತು.

ಲೊಕಸಭಾ ಚುನಾವಣೆಗೆ ತಯಾರಿ ನಿಟ್ಟಿನಲ್ಲಿ ಇಂದು ಶಿಕಾರಿಪುರದಿಂದ ರಾಯಚೂರಿನ ಲಿಂಗಸಗೂರಿಗೆ ಯಡಿಯೂರಪ್ಪ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹೆಲಿಕಾಪ್ಟರ್ ಹತ್ತುವಾಗ ಈ ಘಟನೆ ನಡೆದಿದೆ. ಹೆಲಿಕಾಪ್ಟರ್ ಹತ್ತಿದ ಬಳಿಕ ಪ್ರಥಮ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದಿದ್ದಾರೆ. ಆದರೆ ಕಾಲು ಉಳುಕಿದ್ದರಿಂದ ಹೆಲಿಕಾಪ್ಟರ್ ನಿಂದ ಇಳಿಯುವಾಗ ನೋವಿನಿಂದ ಕಷ್ಟಪಡುವಂತಾಗಿದೆ. ಭದ್ರತಾ ಸಿಬ್ಬಂದಿಗಳ ಸಹಾಯದಿಂದ ಸಾವಕಾಶವಾಗಿ ಹೆಲಿಕಾಪ್ಟರ್ ನಿಂದ ಇಳಿದು ಕಾರ್ಯಕ್ರಮಕ್ಕೆ ತೆರಳಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button