*ನನಗೀಗ 82. ದೇವರು ಶಕ್ತಿ ನೀಡಿದ್ರೆ ಇನ್ನೊಂದು ವಿಧಾನಸಭೆ, ಲೋಕಸಭೆ ಮಾಡ್ತೇನೆ; ಮಾಜಿ ಸಿಎಂ ಯಡಿಯೂರಪ್ಪ*

ಪ್ರಗತಿವಾಹಿನಿ ಸುದ್ದಿ:
ನನಗೀಗ 82 ವರ್ಷ. ದೇವರು ಶಕ್ತಿ ಕೊಟ್ಟರೆ ಇನ್ನೊಂದು ವಿಧಾನಸಭೆ, ಲೋಕಸಭೆ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯಿತ ಮುಖಂಡರ ಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಗೋವಿಂದ ಕಾರಜೋಳಗೆ ಗೆಲ್ಲಿಸಿದ್ರೆ ನನಗೆ ಗೆಲ್ಲಿಸಂತೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸಲಿ ಎಂದರು.
ಮೋದಿ ಎದುರು ಅವರಿಗೆ ಮತ್ತೊಂದು ಹೆಸರು ಹೇಳುವ ಧೈರ್ಯವಿಲ್ಲ. ಹಾಗಾಗಿ ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ ಎಂಬುದು ಸ್ಪಷ್ಟ ಎಂದರು.
ಹಂಪಿ ಉತ್ಸವದಂತೆ ಮದಕರಿ ನಾಯಕ ಉತ್ಸವ ನಡೆಸಲಾಗುವುದು ಎಂದ ಯಡಿಯುರಪ್ಪ, ಇಂದಲ್ಲ ನಾಳೆ ಭದ್ರಾ ಯೋಜನೆಗೆ 5.300 ಕೋಟಿ ಬರಲಿದೆ. ಕಾಂಗ್ರೆಸ್ ನಿರ್ಲಕ್ಷ್ಯದಿಂದ ಕೊಂಚ ತಡವಾಗಿರಬಹುದು. ಆದರೆ ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ಮಾತನಾಡಿ ಶೀಘ್ರ ಅನುದಾನ ತರುತ್ತೇವೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ