Latest

ಆನೆ ಮೇಲೆ ಯೋಗ ಮಾಡಲು ಹೋದ ಬಾಬಾ ರಾಮ್ ದೇವ್ ಕಥೆ ಏನಾಯಿತು ನೋಡಿ

ಪ್ರಗತಿವಾಹಿನಿ ಸುದ್ದಿ;ಲಕ್ನೋ: ಯೋಗಗುರು ಬಾಬಾ ರಾಮದೇವ್, ಆನೆಯಮೇಲೆ ಕುಳಿತು ಯೋಗ ಮಾಡಲು ಹೋಗಿ ಆನೆಯ ಮೇಲಿಂದ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಮಥುರಾದ ರಾಮನಾರತಿಯ ಗುರು ಶರಣನ್ ಆಶ್ರಮದಲ್ಲಿ ಸಂತರಿಗೆ ಯೋಗ ಕಲಿಸುವಾಗ ಈ ಘಟನೆ ಸಂಭವಿಸಿದೆ. 22 ಸೆಕೆಂಡ್‍ಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆನೆಯ ಮೇಲೆ ಬಾಬಾ ರಾಮ್‍ದೇವ್ ಯೋಗಾಸನ ಮಾಡುತ್ತಿದ್ದು, ಕೆಲವೇ ಸೆಕೆಂಡ್‍ಗಳ ಬಳಿಕ ಆನೆ ಅತ್ತಿತ್ತ ವಾಲುತ್ತದೆ. ಈ ವೇಳೆ ರಾಮ್‍ದೇವ್ ಅವರ ಬ್ಯಾಲೆನ್ಸ್ ತಪ್ಪಿದ್ದು, ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಮೇಲಕ್ಕೆದ್ದು ಮುಂದೆ ಹೋಗಿದ್ದಾರೆ.

ಇತ್ತೀಚೆಗೆ ಬಾಬಾ ರಾಮ ದೇವ್ ಜೋರಾಗಿ ಸೈಕಲ್ ಸವಾರಿ ಮಾಡಿ ರಸ್ತೆಯ ತಿರುವೊಂದರಲ್ಲಿ ಬಿದ್ದಿದ್ದರು.ಈ ವಿಡಿಯೋ ಸಹ ವೈರಲ್ ಆಗಿತ್ತು.

Home add -Advt

Related Articles

Back to top button