National

*ಬಾಬಾ ಸಿದ್ದಿಕಿ ಕೊಲೆ ಪ್ರಕರಣ: ಪ್ರಮುಖ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮುಂಬೈ ಮತ್ತು ಪಂಜಾಬ್ ಪೊಲೀಸ್‌ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮುಂಬೈ ನಿವಾಸಿ ಸುಜಿತ್ ಸುಶೀಲ್ ಸಿಂಗ್ ಎಂಬಾತನನ್ನು ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಈತ ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎನ್ನಲಾಗಿದ್ದು, ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಟೋಯ್ ಗುಂಪಿಗೆ ಸೇರಿದವನಾಗಿದ್ದಾನೆ. ಪಂಜಾಬ್‌ ಡಿಜಿಪಿ ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದು, ಪಂಜಾಬ್ ಮತ್ತು ಮುಂಬೈ ಪೊಲೀಸರು ನಡೆಸಿದ ಭಾರೀ ಕಾರ್ಯಾಚರಣೆಯಿಂದ ಈ ಆರೋಪಿಯನ್ನು ಬಂಧಿಸಲಾಗಿದೆ. ಈತ ಬಾಬಾ ಸಿದ್ದಿಕಿ ಕೊಲೆ ಪ್ರಕರಣದಲ್ಲಿ ಮುಖ್ಯ ಪಾತ್ರ ವಹಿಸಿದ್ದಾನೆಂದು ತಿಳಿಸಿದ್ದಾರೆ.

ಸಧ್ಯಕ್ಕೆ ಬಂಧಿತರಾಗಿರುವ ನಿತಿನ್ ಗೌತನ್ ಹಾಗೂ ಮತ್ತೊಬ್ಬ ಆರೋಪಿಗೆ ಕೊಲೆ ನಡೆಯುವ ಮೂರು ದಿನಗಳ ಹಿಂದೆ ಈತ ಕೊಲೆ ಪ್ಲಾನ್ ವಿವರಿಸಿದ್ದ. ಹೆಚ್ಚಿನ ವಿಚಾರಣೆಗೆ ಈತನನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button