Kannada NewsLatestNational

*ಗುರುದ್ವಾರ‌ ಮುಖ್ಯಸ್ಥನನ್ನು ಶೂಟ್ ಮಾಡಿದವನ ಎನ್‌ಕೌಂಟರ್‌ ಮಾಡಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಕಳೆದ ಕೆಲ ದಿನಗಳ ಹಿಂದೆ ಗುರುದ್ವಾರವೊಂದರ ಮುಖ್ಯಸ್ಥನನ್ನು ಬೈಕ್ ಮೇಲೆ ಬಂದಿದ್ದ ಇಬ್ಬರು ಮುಸುಕುದಾರಿಗಳು ಶೂಟ್ ಮಾಡಿ, ಪರಾರಿ ಆಗಿದ್ದ ಪ್ರಕರಣ ದೇಶದಲ್ಲಿ ಸಾಕಷ್ಟು ಸದ್ದು ಮಾಡಿತ್ತು.‌ ಪ್ರಕರಣದಲ್ಲಿ ಓರ್ವ ಆರೊಪಿಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ.

ಈ ಘಟನೆ ನಡೆದ ದಿನವೇ ಫುಲ್ ಅಲರ್ಟ್ ಆಗಿದ್ದ ಪೊಲೀಸರು 8 ವಿಶೇಷ ತಂಡ ರಚನೆ ಮಾಡಿ, ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದರು.‌ ಉತ್ತರಾಖಂಡ ನಾನಕಮಟ್ಟಾ ಗುರುದ್ವಾರದ ಕರಸೇವಾ ಮುಖ್ಯಸ್ಥ ಬಾಬಾ ತಾರ್ಸೆಮ್ ಸಿಂಗ್‌ ಅವರನ್ನು ಕೊಂದಿದ್ದ ಪ್ರಮುಖ ಆರೋಪಿ, ಶೂಟರ್ ಅಮರ್‌ಜಿತ್‌ ಸಿಂಗ್ ಅಲಿಯಾಸ್ ಬಿಟ್ಟುವನ್ನು ಮುಂಜಾನೆ ಹರಿದ್ವಾರದ ಭಗವಾನ್‌ಪುರ ಪ್ರದೇಶದಲ್ಲಿ ಉತ್ತರಾಖಂಡ ವಿಶೇಷ ಕಾರ್ಯಪಡೆ ಎಸ್‌ಟಿಎಫ್‌ ಎನ್‌ಕೌಂಟರ್‌ ಮಾಡಿದೆ ಎಂದು ತಿಳಿದು ಬಂದಿದೆ.

ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿದ ಅಮರ್‌ಜಿತ್ ಸಿಂಗ್ ವಿರುದ್ಧ 16ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಾಖಂಡ ವಿಶೇಷ ಕಾರ್ಯಪಡೆ ಮತ್ತು ಹರಿದ್ವಾರ ಪೊಲೀಸರು, ತಲೆಮರೆಸಿಕೊಂಡಿರುವ ಇತರ ಆರೋಪಿಗಳನ್ನು ಪತ್ತೆ ಹಚ್ಚಲು ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

Home add -Advt

Related Articles

Back to top button