ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸುವರ್ಣ ವಿಧಾನಸೌಧದೆದುರು ಇಂದು ಪಂಚಮಸಾಲಿ ಅಂಗಾಯತ ಸಮಾಜದವರು ಬೃಹತ್ ಸಮಾವೇಶ ಹಮ್ಮಿಕೊಂಡಿದ್ದು ಸುಮಾರು 4-5 ಲಕ್ಷ ಜನರು ಹಿರೇಬಾಗೇವಾಡಿಯಿಂದ ಬಸ್ತವಾಡ ಸಮಾವೇಶ ಸ್ಥಳದವರೆಗೆ ಪಾದಯಾತ್ರೆ ಮೂಲಕ ಬರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಬೆಳಗಾವಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ವಾಹನ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸಂಜೆ 6 ಗಂಟೆಯವರೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ.
1. ಕೊಲ್ಲಾಪುರದಿಂದ ಹುಬ್ಬಳ್ಳಿ-ಧಾರವಾಡ ಮಾರ್ಗವಾಗಿ ಬೆಂಗಳೂರು ಕಡೆಗೆ ಸಾಗುವ ಎಲ್ಲ ಭಾರಿ ಮತ್ತು ಲಘು ವಾಹನಗಳು ಸಂಕೇಶ್ವರದಿಂದ ಮಾರ್ಗ ಬದಲಿಸಿ ಮುಂದೆ ಹುಕ್ಕೇರಿ – ಗೋಕಾಕ – ಯರಗಟ್ಟ- ಸವದತ್ತಿ – – ಮಾರ್ಗವಾಗಿ ಧಾರವಾಡ ಕಡೆಗೆ ಸಂಚರಿಸುವುದು. (ಬೆಳಗಾವಿ ನಗರಕ್ಕೆ ಬರುವ ವಾಹನಗಳನ್ನು ಹೊರತುಪಡಿಸಿ)
2. ಬೆಂಗಳೂರು ಕಡೆಯಿಂದ ಬೆಳಗಾವಿನಗರಕ್ಕೆ ಹಾಗೂ ಕೊಲ್ಲಾಪುರ ಕಡೆಗೆ ಸಾಗುವ ಎಲ್ಲ ಭಾರಿ ಮತ್ತು ಲಘು ವಾಹನಗಳು ಎಂ.ಕೆ ಹುಬ್ಬಳ್ಳಿ ಹತ್ತಿರ ಮಾರ್ಗ ಬದಲಿಸಿ, ಬೈಲಹೊಂಗಲ ನೇಸರಗಿ ಬೆಳಗಾವಿ ಕಡೆಗೆ ಸಂಚರಿಸಬೇಕು.
3. ಒಂದು ವೇಳೆ ಎಂ.ಕೆ ಹುಬ್ಬಳ್ಳಿಯ ಹತ್ತಿರ ಸಂಚಾರ ದಟ್ಟಣೆ ಉಂಟಾದಲ್ಲಿ ಪರ್ಯಾಯ ಮಾರ್ಗವಾಗಿ ಕಿತ್ತೂರ ಕಡೆಯಿಂದ ಮಾರ್ಗ ಬದಲಿಸಿ ಬೀಡಿ-ನಂದಗಡ-ಖಾನಾಪುರ ಮಾರ್ಗವಾಗಿ ಬೆಳಗಾವಿ ಕಡೆಗೆ ಸಂಚರಿಸಬೇಕು.
ಸಾರ್ವಜನಿಕರು ಬದಲಾದ ಮಾರ್ಗಗಳಲ್ಲಿ ಸಂಚರಿಸಿ ಸಹಕರಿಸಲು ಬೆಳಗಾವಿ ಪೊಲೀಸ್ ಕಮಿಷನರೇಟ್ ಪ್ರಕಟಣೆ ತಿಳಿಸಿದೆ.
ಸಿಎಂ ಮೀಟ್ ಹಾಫ್ ಸಕ್ಸಸ್; ನಾಳೆಯಿಂದ ಸದನಕ್ಕೆ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಹಾಜರ್
https://pragati.taskdun.com/k-s-eshwarappa-ramesh-jarkiholi-met-cm-bommai/
ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಪರಿವರ್ತಿಸುವ ವಿಧಾನ ಸರಳೀಕರಣ
https://pragati.taskdun.com/simplification-of-procedure-for-conversion-of-agricultural-land-for-non-agricultural-purposes/
ಆಟೋ, ಕ್ಯಾಬ್ ಚಾಲಕರಿಗೆ ಆಯುಷ್ಮಾನ್ ಭಾರತ್ ಅಡಿ ಉಚಿತ ಚಿಕಿತ್ಸೆ
https://pragati.taskdun.com/free-treatment-under-ayushman-bharat-for-auto-and-cab-drivers/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ