ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಹಲವಾರು ವರ್ಷಗಳಿಂದ ನಡೆದಿರುವ ಅಯೋಧ್ಯೆ ಪ್ರಕರಣದ ತಿರ್ಪು ನವೆಂಬರ್ ೧೭ ರಂದು ಹೋರಬೀಳಲಿದೆ. ಇದನ್ನು ಎರಡೂ ಸಮಾಜದವರು ಆಕ್ಷೇಪಿಸಿ ಗಲಾಟೆ ಮಾಡುವುದಕ್ಕೆ ಪುಡಾರಿಗಳಿಗೆ ಪ್ರಚೋದನೆ ಹಾಗೂ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಕಂಡು ಬಂದರೆ ಕಠಿಣ ಕ್ರಮ ಕೈಕೊಳ್ಳಲಾಗುವುದು ಎಂದು ಗೋಕಾಕ ಡಿಎಸ್ಪಿ ಡಿ.ಟಿ.ಪ್ರಭು ಖಡಕ್ ಎಚ್ಚರಿಕೆ ನೀಡಿದರು.
ಅವರು ಇಲ್ಲಿನ ಪೋಲಿಸ್ ಠಾಣೆಯ ಮೈದಾನದಲ್ಲಿ ಅಯೋಧ್ಯೆ ತಿರ್ಪು ಪ್ರಕರಣ ಹಾಗೂ ಟಿಪ್ಪು ಸುಲ್ತಾನ ಜಯಂತಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಗುರುವಾರ ನಡೆದ ರೌಡಿಶೀಟರ್‌ಗಳ ಪರೇಡ್‌ನಲ್ಲಿ ಮಾತನಾಡಿದರು.
ಎರಡು ಸಮಾಜದ ಮುಖಂಡರಿಗೆ ಈಗಾಗಲೇ ಸಭೆ ನಡೆಸಿ ಸಮಗ್ರವಾಗಿ ಮಾಹಿತಿ ನೀಡಲಾಗಿದೆ, ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಹುಕ್ಕೇರಿ, ಸಂಕೇಶ್ವರ, ಪಾಶ್ಚಾಪೂರ ವ್ಯಾಪ್ತಿಯಲ್ಲಿರುವ ರೌಡಿಶೀಟರ್‌ಗಳನ್ನು ಕರೆಸಿ ತಿಳವಳಿಕೆ ನೀಡಲಾಗುತ್ತದೆ, ಆದರೂ ಇದಕ್ಕೂ ಮೀರಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವುದು, ಸಮಾಜದಲ್ಲಿ ಗಲಭೆಗೆ ಪ್ರಚೋದನೆ ನೀಡುವುದು ಸೇರಿದಂತೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಿ ಜನರಿಗೆ ಗೊಂದಲ ಮೂಡಿಸುವುದು, ಸಾರ್ವಜನಿರೊಂದಿಗೆ ಹಾಗೂ ಪೋಲಿಸ್ ಸಿಬ್ಬಂದಿಯ ಜತೆಗೆ ಅನುಚಿತವಾಗಿ ವರ್ತಿಸುವುದು ಮತ್ತಿತರ ಅಹಿತಕರ ಘಟನೆಗಳಲ್ಲಿ ರೌಡಿಶೀಟರ್‌ಗಳು ಭಾಗಿಯಾಗಿದ್ದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದರು.
ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬರು ಈಗಾಲೇ ಹಲವಾರು ಪ್ರಕರಣಗಳಲ್ಲಿ ಜೈಲುವಾಸ ಮುಗಿಸಿ, ತಮ್ಮ ಜೀವದಲ್ಲಿ ಸುಖವಾಗಿದ್ದೀರಿ, ಇದನ್ನು ಅರ್ಥಮಾಕೊಂಡು ಸಮ್ಮನೆ ಸುಖಜೀವನ ನಡೆಸಬೇಕೆಂದು ಬುದ್ದಿ ಹೇಳಿದರು,
ಪಿಎಸ್‌ಐಗಳಾದ ಶಿವಾನಂದ ಗುಡಗನಟ್ಟಿ, ಗಣಪತಿ ಕಂಗನೋಳ್ಳಿ, ರಮೇಶ ಪಾಟೀಲ ಹಾಗೂ ಅರಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ