
ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಹೇಯ ಕೃತ್ಯ ನಡೆದಿದೆ. ಬ್ಯಾಡ್ಮಿಂಟನ್ ಕೋಚ್ ಓರ್ವ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.
ತಮಿಳುನಡು ಮೂಲದ ಸುರೇಶ್ ಬಾಲಾಜಿ ಎಂಬ ಬ್ಯಾಡ್ಮಿಂಟನ್ ಕೋಚ್ ಬಾಲಕಿ ಮೇಲೆ ಅತ್ಯಾಚಾರವೆಸಗಿ ಫೋಟೋ, ವಿಡಿಯೋ ಸೆರೆಹಿಡಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಾಲಕಿಗೆ ಎರಡು ವರ್ಷಗಳಿಂದ ಬ್ಯಾಡ್ಮಿಂಟನ್ ಟ್ರೈನಿಂಗ್ ಕೊಡುತ್ತಿದ್ದ. ಕೋಚಿಂಗ್ ನೀಡುವ ನೆಪದಲ್ಲಿ ಕಾಮುಕ ಬಾಲಕಿ ಮೇಲೆ ಮುಗಿಬಿದ್ದಿದ್ದಾನೆ. ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾಮುಕನ ಮೊಬೈಲ್ ನಲ್ಲಿ ೮ ಯುವತಿಯರ ಅಶ್ಲೀಲ ಫೋಟೋ ಗಳು ಕೂಡ ಇದೆ ಎನ್ನಲಾಗಿದೆ.