Kannada NewsKarnataka NewsLatest

*ಕಾರು ಪಲ್ಟಿಯಾಗಿ ಕೈ ಕಟ್: ತುಂಡಾದ ಕೈ ಹಿಡಿದು ಆಸ್ಪತ್ರೆಗೆ ಬಂದ ಯುವಕ*

ಪ್ರಗತಿವಾಹಿನಿ ಸುದ್ದಿ: ಕಾರು ಪಲ್ಟಿಯಾಗಿ ಯುವಕನ ಕೈ ತುಂಡಾಗಿದ್ದು, ತುಂಡಾಗಿ ಬಿದ್ದಿದ್ದ ಕೈ ಹಿಡಿದುಕೊಂಡು ಯುವಕ ಆಸ್ಪತ್ರೆಗೆ ಆಗಮಿಸಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ರಬಕವಿ ಮೂಲದ ರೋಹನ್ ವಾಗಮೋರೆ ಎಂಬ ಯುವಕನ ಕೈ ಅಪಘಾತದಲ್ಲಿ ಕಟ್ ಆಗಿದ್ದು, ಕಟ್ ಆದ ಕೈನ್ನು ಪ್ಲಾಸ್ಟಿಕ್ ಕವರ್ ನಲ್ಲಿಟ್ಟುಕೊಂಡು ಯುವಕ ಜಮಖಂಡಿ ಆಸ್ಪತ್ರೆಗೆ ಆಗಮಿಸಿದ್ದಾನೆ. ವೈದ್ಯರು ತಕ್ಷಣ ಯುವಕನಿಗೆ ಚಿಕಿತ್ಸೆ ನೀಡಿದ್ದಾರೆ.

Home add -Advt

ಯುವಕ ರೋಹನ್ ಹಾಗೂ ಸ್ನೇಹಿತರು ಕಾರಿನಲ್ಲಿ ತೆರಳುತ್ತಿದ್ದಾಗ ಜಮಖಂಡಿಯ ಕಡಕೋಳ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಬಿದ್ದಿದ್ದು, ಅಪಘಾತದಲ್ಲಿ ಯುವಕನ ಕೈ ತುಂಡಾಗಿದೆ. ತುಂಡಾಗಿ ಬಿದ್ದಿರುವ ಕೈಯನ್ನು ಯುವಕ ನೋವಿನ ನರಳಾಟದ ನಡುವೆ ಆಸ್ಪತ್ರೆಗೆ ತೆಗೆದುಕೊಂಡು ಬಂದು ಚಿಕಿತ್ಸೆ ಪಡೆದಿದಾನೆ. ಜಮಖಂಡಿ ಆಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ.


Related Articles

Back to top button