ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಮೈತ್ರಿ ಸರ್ಕಾರದಲ್ಲಿ ನನಗೆ ಯಾವುದೇ ಸ್ವಾತಂತ್ರ್ಯ ಇರಲಿಲ್ಲ. ನನ್ನ ಮೇಲೆ ಬಹಳ ಒತ್ತಡವಿತ್ತು. ನಾನು ಕ್ಲರ್ಕ್ ತರಹ ಇದ್ದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೈತ್ರಿ ಸರ್ಕಾರದಲ್ಲಿ ನಾನು ಸ್ವತಂತ್ರವಾಗಿ ಯಾವುದೇ ನಿರ್ಧಾರ ಕೈಗೊಳ್ಳುವಂತೆ ಇರಲಿಲ್ಲ. ಒಂದೆಡೆ ಸಿದ್ದರಾಮಯ್ಯನವರ ಒತ್ತಡ, ಇನ್ನೊಂದೆಡೆ ನೀರಾವರಿ ಯೋಜನೆ ಮುಂದುವರೆಸಲು ಒತ್ತಡ. ಮತ್ತೊಂದೆಡೆ ರೈತರ ಸಾಲಮನ್ನಾ ಬಗ್ಗೆ ಬಿಜೆಪಿಯಿಂದ ಒತ್ತಡವಿತ್ತು. ಒಟ್ಟಾರೆ ಮೈತ್ರಿ ಸರ್ಕಾರದಲ್ಲಿ ನಾನು ಕ್ಲರ್ಕ್ ನಂತೆ ಕೆಲಸ ಮಾಡಬೇಕಿತ್ತು ಎಂದಿದ್ದಾರೆ.
ರೈತರಿಗಾಗಿ ನಾನು 25 ಸಾವಿರ ಕೋಟಿ ರೂಪಾಯಿ ಹೊಂದಿಸಿಕೊಟ್ಟೆ. ಆದರೆ ಅದು ನಿಮಗೆ ನೆನಪಿಲ್ಲ. ಆದರೆ ಪ್ರಧಾನಿ ಮೋದಿ ಕೊಟ್ಟ 3 ಸಾವಿರ, 6 ಸಾವಿರ ರೂಪಾಯಿ ನಿಮಗೆ ನೆನಪಿರುತ್ತದೆ ಎಂದು ಗುಡುಗಿದ್ದಾರೆ.
ಇದೇ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಡಿ ವಿಚಾರವಾಗಿ ಮಾತನಾಡಿದ ಅವರು, ಯತ್ನಾಳ್ ಸಿಡಿ ವಿಚಾರದಲ್ಲಿ ನಾನು ಪಾಲುದಾರನಲ್ಲ. ಈ ಸಿಡಿ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ