Kannada NewsLatest

ಗೋವಾಕ್ಕೆ ಅಕ್ರಮ ಗೋಮಾಂಸ ಸಾಗಾಟ; ಇಬ್ಬರ ಬಂಧನ

ಪ್ರಗತಿವಾಹಿನಿ ಸುದ್ದಿ; ಬಾಗೇವಾಡಿ: ಬಾಗೇವಾಡಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗುತ್ತಿದ್ದ ಪುಂಡರನ್ನು ಹೆಡೆಮುರಿ ಕಟ್ಟಿದ್ದಾರೆ.

ರಾತ್ರಿ ಸುಮಾರು  2.30ಕ್ಕೆ ಹಲಗೆ ಮರಡಿ ಕ್ರಾಸ್ ಮುಖಾಂತರ ಎರಡು ವ್ಯಾನ್ ನಲ್ಲಿ ಗೋವಾಗೆ ಗೋಮಾಂಸ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬಾಗೇವಾಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Related Articles

ಬಂಧಿತರನ್ನು ಹುಸೇನ್ ದೇಸಾಯಿ ಹಾಗೂ ಆಜಾದ್ ಕಾದ್ರೊಳ್ಳಿ ಮಡಗಾವ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಅಪಾರ ಪ್ರಮಾಣದ ಗೋಮಾಂಸ ಹಾಗೂ ವ್ಯಾನ್ ವಶಕ್ಕೆ ಪಡೆಯಲಾಗಿದೆ.

ಸಿಪಿಐ ವಿಜಯಕುಮಾರ್ ಸಿನ್ನೂರ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಶಶಿಕುಮಾರ್ ಕೊರಲೆ ಹಾಗೂ ಸಿಬ್ಬಂದಿಯಾದ ನಾಗಪ್ಪ ಸುತಗಟ್ಟಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಜೂನ್ 11 ರ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

Home add -Advt

Related Articles

Back to top button