
ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಸಮೀಪದ ಹೊಸೂರ ಗ್ರಾಮದ ರೈತ ಹುದ್ದಾರ ಅವರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ರೈತರು ಭಯಭೀತರಾದರು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸದ ಅರಣ್ಯ ಇಲಾಖೆ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಎರಡುಮೂರು ದಿನಗಳ ಹಿಂದೆ ಬಾರಿ ಮಳೆಯಿಂದ ಗ್ರಾಮದ ಸೇತುವೆ ಮೇಲಿಂದ ಮಲಪ್ರಭಾ ನದಿಗೆ ನೀರು ಹರಿದ ಪರಿಣಾಮ ನದಿಯಲಿದ್ದ ಮೊಸಳೆ ರೈತರ ಜಮೀನಿಗೆ ಬಂದಿದೆ.
ಬೆಳಗಿನ ಜಾವ ಗ್ರಾಮದ ರೈತನ ಹೊಲದಲ್ಲಿ ಕಟ್ಟಿದ್ದ ನಾಯಿಯೊಂದು ಬಹಳಷ್ಟು ಕಿರುಚ ತೊಡಗಿದಾಗ ರೈತ ಹೋಗಿ ನೊಡುವಷ್ಟರಲ್ಲಿ ನಾಯಿ ಮೊಸಳೆಯ ಬಾಯಿಗೆ ಆಹಾರವಾಗಿತ್ತು.
ಇದನ್ನು ನೋಡಿದ ರೈತ ಗ್ರಾಮದ ಯುವಕರಿಗೆ ವಿಷಯ ಮುಟ್ಟಿಸಿದ್ದರಿಂದ ಕಬ್ಬಿನ ಗದ್ದೆಗೆ ತೆರಳಿದ ಗ್ರಾಮದ ಯುವಕರ ತಂಡ ಕಬ್ಬು ಬೆಳೆಯಲ್ಲಿ ನಾಯಿಯನ್ನು ತಿಂದ ಮೊಸಳೆ ಕಣ್ಣಿಗೆ ಬಿತ್ತು.
ಭಯಭೀತರಾದ ಯುವಕರು ತಕ್ಷಣ ಪೊಲೀಸ್ ಹಾಗೂ ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ
ಪೋಲಿಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಅಗಮಿಸಿದರೆ ಅರಣ್ಯ ಇಲಾಖೆಯ ಸಿಬ್ಬಂದಿಯ ಸುಳಿವೆ ಇರಲಿಲ್ಲ.
ಆದರೆ ಮೊಸಳೆ ಮಾತ್ರ ಕಬ್ಬಿನ ಬೆಳೆಯಲ್ಲಿ ಹೊಗಲು ಯತ್ನಿಸಿದಾಗ ಯುವಕರ ತಂಡ ಧೈರ್ಯದಿಂದ ಜೀವದ ಹಂಗು ತೊರೆದು ತಡ ಮಾಡದೆ ಕಬ್ಬು ಬೆಳೆ ತೆಗೆದು ಹಗ್ಗ ಬಳಸಿ ಮೊಸಳೆಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ.
ಚಿಕ್ಕೋಡಿ ಖಾಸಗಿ ಬ್ಯಾಂಕ್ ನಿಂದ 6.47 ಲಕ್ಷ ರೂ. ಕದ್ದಿದ್ದ ನಾಲ್ವರು ಅಂದರ್; ಜಮಖಂಡಿಯಲ್ಲೂ ಕನ್ನ ಹಾಕಿದ್ದ ಖದೀಮರು
https://pragati.taskdun.com/latest/the-four-who-had-stolen-6-47-lakh-from-chikkodi-private-bank-were-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ