ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ಅನೇಕ ಕಾರ್ಯಕರ್ತರು ತಮ್ಮ ಪರಿಶ್ರಮದೊಂದಿಗೆ ರಕ್ತವನ್ನು ಹರಿಸಿ ಬಿಜೆಪಿ ಪಕ್ಷದ ಗೆಲುವಿಗಾಗಿ ದುಡಿಯುತ್ತಿರುವದರಿಂದ ಇಂದು ಬಿಜೆಪಿ ಪ್ರಪಂಚದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದರು.
ಮಂಗಳವಾರ ಪಟ್ಟಣದ ಬ್ಯಾಡ್ಮಿಂಟನ್ ಹಾಲದಲ್ಲಿ ಮಂಡಲದ ಪದಾಧಿಕಾರಿಗಳ, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್ ಅಧ್ಯಕ್ಷರ ಸಮಾವೇಶ ಉದ್ಘಾಟನೆ ಗೊಳಿಸಿ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಇಂದು ಅನೇಕರು ನಾಯಕರಾಗುತ್ತಿದ್ದಾರೆ. ನಿಮ್ಮೆಲ್ಲರ ಪರಿಶ್ರಮದಿಂದ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 17 ವರ್ಷದಿಂದ ಸಂಸದರಾಗಿ ಕೇಂದ್ರ ರೈಲ್ವೆ ಸಚಿವರಾಗಿ ಉತ್ತಮ ಕಾರ್ಯಗಳನ್ನು ಮಾಡುವುದರೊಂದಿಗೆ ಈ ಭಾಗದ ಅಭಿವೃದ್ಧಿ ಹರಿಕಾರ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕಿಂತ ಹೆಚ್ಚಿನ ಅಂತರದೊಂದಿಗೆ ಗೆಲುವು ಸಾಧಿಸಲು ನಿಮ್ಮ ಶ್ರಮ ಅತ್ಯಗತ್ಯವಾಗಿದೆ. ಬಿಜೆಪಿ ಶಿಸ್ತುಬದ್ಧ ಪಕ್ಷವಾಗಿದ್ದು ಅಭ್ಯರ್ಥಿ ಆಯ್ಕೆ ಹಿರಿಯರ ಮೇಲಿದೆ. ಆದರೆ ಪಕ್ಷದ ಪದಾಧಿಕಾರಿಗಳು ಒಂದು ತಿಂಗಳಿಂದ ಬಿಜೆಪಿಯ ಚುನಾವಣಾ ತಯಾರಿ ನಡೆದಿದ್ದು ಎಲ್ಲಾ ಕಾರ್ಯಕರ್ತರನ್ನು ಅವರ ಜವಾಬ್ದಾರಿಗೆ ಅನುಗುಣವಾಗಿ ಜೋಡಿಸಲಾಗಿದೆ. ಈ ಉಪಚುನಾವಣೆಯಲ್ಲಿ ಬೈಲಹೊಂಗಲ ಮತಕ್ಷೇತ್ರದಿಂದ 50 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕೊಡಬೇಕೆಂದರು. ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ್ ಪಾಟೀಲ್ ಮಾತನಾಡಿ, ಬಿಜೆಪಿ ಕಾರ್ಯಕರ್ತರಾದ ನಾವು ಅಭ್ಯರ್ಥಿಯ ಬಗ್ಗೆ ಕಾಯದೆ ಸದಾ ಪಕ್ಷದ ಪರವಾಗಿ ಕೆಲಸವನ್ನು ಮಾಡುತ್ತಿದ್ದೇವೆ ಅನ್ಯ ಪಕ್ಷಗಳಿಗಿಂತ ನಮ್ಮ ಪಕ್ಷದ ಕಾರ್ಯಕರ್ತರು ದೇಶ ಸೇವೆ ಮಾಡುವ ಭಾವನೆಯಂತೆ ಪಕ್ಷದ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುವುದರಿಂದ ಅತಿಹೆಚ್ಚಿನ ಮತಗಳ ಅಂತರದಲ್ಲಿ ಖಂಡಿತವಾಗಿ ವಿಜಯ ಸಾಧಿಸಲಿದ್ದೆವೆ ಎಂದರು.
ಬೆಳಗಾವಿ ವಿಭಾಗ ಸಂಘಟನಾತ್ಮಕ ಕಾರ್ಯದರ್ಶಿ ಪ್ರಕಾಶ್ ಅಕ್ಕಲಕೋಟ್ ಸಂಘಟನಾತ್ಮಕವಾಗಿ ಮಾತನಾಡಿ, ಪ್ರತಿಯೊಂದು ಮನೆಗೆ ನಮ್ಮ ಕಾರ್ಯಕರ್ತರು ಭೇಟಿಯಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಎಳೆ, ಎಳೆಯಾಗಿ ತಿಳಿಸಬೇಕು ಪ್ರತಿಯೊಂದು ಮತವು ಅತಿ ಅಮೂಲ್ಯ. ಮತದಾರರ ಮನಸ್ಸನ್ನು ಪರಿವರ್ತನೆ ಮಾಡುವತ್ತ ನಮ್ಮ ಕಾರ್ಯಕರ್ತರು ಪರಿಶ್ರಮ ಹಾಕಬೇಕು ಎಂದರು.
ಮಾಜಿ ಶಾಸಕ ಕಾಡಾ ಅಧ್ಯಕ್ಷ ಡಾ.ವಿ.ಆಯ್. ಪಾಟೀಲ್, ಜಗದೀಶ್ ಮೆಟಗುಡ್ ಮಾತನಾಡಿದರು. ವೇದಿಕೆ ಮೇಲೆ ಜಿಲ್ಲಾ ಪ್ರಭಾರಿ ಮಾಜಿ ಸಚಿವ ಶಶಿಕಾಂತ್ ನಾಯಕ್ ವಿಭಾಗದ ಸಹನ ಸಂಘಟನಾ ಕಾರ್ಯದರ್ಶಿ ಬಸವರಾಜ್ ಯಂಕಂಚಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಮೋಹಿತೆ ಸುಭಾಷ್ ಪಾಟೀಲ್ ಸಂದೀಪ್ ದೇಶಪಾಂಡೆ ಖಜಾಂಚಿ ಮಲ್ಲಿಕಾರ್ಜುನ್ ಮಾಧಮ್ಮನವರ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಉಪಾಧ್ಯಕ್ಷ ರತ್ನ ಗೋಧಿ, ಗುರು ಮೆಟಗುಡ್ ಗುರುಪಾದ ಕಳ್ಳಿ, ಯುವ ಮೊರ್ಚಾ ಅಧ್ಯಕ್ಷ ಬಸವರಾಜ್ ನೇಸರಗಿ, ಮಾಜಿ ಅಧ್ಯಕ್ಷ ಮಡಿವಾಳಪ್ಪ ಹೋಟಿ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರ್ಗಿ ಮಲ್ಲಿಕಾರ್ಜುನ್ ದೇಸಾಯಿ ಇದ್ದರೂ ಕಾರ್ಯಕ್ರಮದಲ್ಲಿ ವಿಜಯ ಮೆಟಗುಡ್, ಜಿಪಂ ಸದಸ್ಯ ಜಿಪಂ ಸದಸ್ಯ ಬಸವರಾಜ್ ಬಂಡಿವಡ್ಡರ್ ತಾಪಂ ಸದಸ್ಯ ಸುರೇಶ್ ಮ್ಯಾಕಲ್ ಶಿವಾನಂದ್ ಪೂಜಾರಿ ಪುರಸಭೆ ಸದಸ್ಯರಾದ ಬಸವರಾಜ ಶಿಂತ್ರಿ, ಮಹೇಶ್ ಹರಕುಣಿ, ಸುನಿಲ್ ಮರಕುಂಬಿ, ಪ್ರಕಾಶ್ ಭರಮಗೌಡರ, ಭರಮನಾಯ್ಕ ಮಲ್ಲೂರ್, ಗೌಡಪ್ಪ ಹೊಸಮನಿ ಸೇರಿದಂತೆ ನೂರಾರು ಪದಾಧಿಕಾರಿಗಳು ಇದ್ದರು.
ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ ಸ್ವಾಗತಿಸಿದರು ಮಲ್ಲಿಕಾರ್ಜುನ್ ಗೌಡತಿ ನಿರೂಪಿಸಿದರು ಸಂತೋಷ ಹಡಪದ ವಂದಿಸಿದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ