Kannada NewsLatest

ಕೋವಿಡ್ ಮೂರನೇ ಅಲೆ ಹಿನ್ನೆಲೆ; ಬಿಜೆಪಿಯಿಂದ ಜನಜಾಗೃತಿ ಕಾರ್ಯ

ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ಕೊರೊನಾ ಮೂರನೇಯ ಅಲೆಯು ಬರುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದರೊಂದಿಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಬಿಜೆಪಿ ಕಾರ್ಯಕರ್ತರಿಂದ ಸಮರೋಪಾದಿಯಲ್ಲಿ ನಡೆಯಲಿದೆ ಎಂದು ಮಾಜಿ ಶಾಸಕ ಕಾಡ ಅಧ್ಯಕ್ಷ ಡಾ ವಿ.ಆಯ್. ಪಾಟೀಲ್ ಹೇಳಿದರು.

ಪಟ್ಟಣದ ನಮೋ ನಗರದಲ್ಲಿರುವ ಇಂಜಿನಿಯರಿಂಗ್ ಸಭಾಭವನದಲ್ಲಿ ರವಿವಾರ ನಡೆದ ಬಿಜೆಪಿ ಆರೋಗ್ಯ ಸ್ವಯಂ ಸೇವಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪ್ರಪಂಚದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಭಾರತ ದೇಶ ಅತ್ಯಂತ ಸಮರ್ಥವಾಗಿ ಕರೋನಾ ಮಹಾಮಾರಿಯ ಎರಡು ಅಲೆಗಳನ್ನು ತಡೆಗಟ್ಟುವುದ ರೊಂದಿಗೆ ಜಗತ್ತಿನಲ್ಲಿ ಅತಿ ಹೆಚ್ಚು ವ್ಯಾಕ್ಸಿನ್ ಮಾಡಿದ ದೇಶ ಭಾರತವಾಗಿದೆ ಅಲ್ಲದೆ ಮೂರನೆಯ ಅಲೆ ಸೃಷ್ಟಿಯಾಗುತ್ತಿದ್ದು ಚಿಕ್ಕಮಕ್ಕಳ ರಕ್ಷಣೆ ಹಾಗೂ ವ್ಯಾಕ್ಸಿನ್ ನೀಡುವುದು ಜನರಲ್ಲಿ ಕರೋನಾ ಜಾಗೃತಿ ಮೂಡಿಸುವುದರೊಂದಿಗೆ ಜನರಲ್ಲಿ ಧೈರ್ಯ ಮೂಡಿಸುವ ಕಾರ್ಯ ಬಿಜೆಪಿ ಆರೋಗ್ಯ ಕಾರ್ಯಕರ್ತರಿಂದ ನಡೆಯಲಿದೆ ಹಾಗೂ ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವದರೊಂದಿಗೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಿಜಯ ಪತಾಕಿ ಹಾರಿಸಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸುವದಾಗಿ ಹೇಳಿದರು.

ಜಿಲ್ಲಾ ಬಿಜೆಪಿ ಆರೋಗ್ಯ ಕಾರ್ಯಕರ್ತರ ಸಂಚಾಲಕಿ ಡಾ ಸೋನಾಲಿ ಸೋನಾಬರ್ತ್ ಮಾತನಾಡಿ, ಕರೋನಾ ಮಹಾಮರಿ ಮೂರನೆಯ ಅಲೆಯಲ್ಲಿ ಮಕ್ಕಳಿಗೆ ಹಾಗೂ ವಯಸ್ಕರರಿಗೆ ಕರೋನಾ ಮಹಾಮಾರಿಯ ತೊಂದರೆಯಾಗಲಿದೆ ಆದ್ದರಿಂದ ಹೆಚ್ಚಿನ ಜನರು ವ್ಯಾಕ್ಸಿನ್ ತೆಗೆದುಕೊಳ್ಳಲು ಕ್ರಮ ಕೈಗೊಳ್ಳಬೇಕು ಶಾಲಾ-ಕಾಲೇಜುಗಳಿಗೆ ಬಿಜೆಪಿ ಕಾರ್ಯಕರ್ತರು ಹೋಗಿ ಎಸ್ ಎಂ ಎಸ್ ಅಂದರೆ ಸೇನಿಟೈಜರ್, ಮಾಸ್ಕ್ ಹಾಗೂ ಸೋಶಿಯಲ್ ಡಿಸ್ಟೆನ್ಸ್ ಕಾಪಾಡಿಕೊಳ್ಳಲು ಮಾರ್ಗದರ್ಶನ ಮಾಡಬೇಕಾಗಿದೆ ಜಿಲ್ಲಾ ಘಟಕದಿಂದ ಪ್ರತಿ ಮಂಡಲಕ್ಕೆ ಆಕ್ಸಿಮೀಟರ, ಥರ್ಮಾಮೀಟರ್ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ನೀಡಲಾಗಿದ್ದು ಇವುಗಳ ಬಳಕೆ ಬಗ್ಗೆ ಜನಸಾಮಾನ್ಯರಿಗೆ ತಿಳಿಸಲು ಕಾರ್ಯಕರ್ತರು ಶ್ರಮ ವಹಿಸಬೇಕೆಂದರು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್ ದೇಶಪಾಂಡೆ ಬಿಜೆಪಿ ಕಾರ್ಯಕರ್ತರು ಸಂಘಟನಾತ್ಮಕ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ ನಿತಿನ್ ಚೌಗುಲೆ ಸಾಮಾಜಿಕ ಜಾಲತಾಣದ ಮೂಲಕ ಜನರಲ್ಲಿ ಕರೋನಾಜಾಗೃತಿ ಬಗ್ಗೆ ತಿಳಿಸಿದರು. ಡಾ ಅಜಯ್ ತಡಕೂಡ ಮಾತನಾಡಿ ಕರೋನಾ ರೋಗ ಬರದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದರು.

ವೇದಿಕೆ ಮೇಲೆ ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ಜಿಲ್ಲಾ ಮಧ್ಯಮ ಸಂಚಾಲಕ ಎಫ್ಎಸ್ ಸಿದ್ದನಗೌಡರ, ಗುರುಪಾದ ಕಳ್ಳಿ, ನಿಂಗಪ್ಪ ಚೌಡನ್ನವರ ಮಡಿವಾಳಪ್ಪ ಹೋಟಿ, ಸಂತೋಷ್ ದೇಶನೂರ್ ಲಕ್ಕಪ್ಪ ಕಾರ್ಗಿ ಮಲ್ಲಿಕಾರ್ಜುನ್ ದೇಸಾಯಿ ಬಸವರಾಜ್ ನೇಸರಗಿ ಇದ್ದರು.

ಕಾರ್ಯಕ್ರಮದಲ್ಲಿ ಡಾ ಮಹಾಂತೇಶ ಪೂಜೇರಿ, ಡಾ ಮಹೇಶ್ ಪಾಟೀಲ್, ಶಾಂತಾ ಮಡ್ಡಿ ಕಾರ್, ಮಹೇಶ್ ಹರ್ಕುಣಿ, ಮುರುಗೇಶ್ ಗುಂಡ್ಲೂರು, ಶಿವಾನಂದ್ ಕೋಲಕಾರ, ಸಚಿನ್ ಕಡಿ, ಈರಣ್ಣ ಬಿಡಿ, ಆನಂದ್ ಮೂಗಿ, ಗೌಡಪ್ಪ ಹೊಸಮನಿ, ಸಂತೋಷ್ ಹಡಪದ್, ಆದರ್ಶ ಗುಂಡಗವಿ, ವಿಶಾಲ್ ಹೊಸೂರ್ ಶಿವಾನಂದ ಪೂಜಾರಿ, ಭರಮನಾಯ್ಕ ಮಲ್ಲೂರ್ ಮುಂತಾದ ನೂರಾರು ಬಿಜೆಪಿ ಕಾರ್ಯಕರ್ತರು ಇದ್ದರು ಹೊಸೂರು ತಾಲೂಕ ಪಂಚಾಯತ್ ಸದಸ್ಯ ಜಗದೀಶ್ ಬೂದಿಹಾಳ ಸ್ವಾಗತಿಸಿದರು ನ್ಯಾಯವಾದಿ ದುಂಡೇಶ ಗರಗದ ನಿರೂಪಿಸಿದರು ಈಶ್ವರ್ ಪೂಜಾರಿ ವಂದಿಸಿದರು.
ಬಿಜೆಪಿ ಆಫರ್ ಬಗ್ಗೆ ಯೂಟರ್ನ್ ಹೊಡೆದ ಶ್ರೀಮಂತ ಪಾಟೀಲ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button