Kannada NewsKarnataka NewsLatest
ಬೆಳಗಾವಿ ಸೋಷಿಯಲ್ ಕ್ಲಬ್ ನಲ್ಲಿ ಗೆಸ್ಟ್ ಹೌಸ್, ಸೆಂಟ್ರಲ್ ಹಾಲ್, ಜಿಮ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ನಗರದ ಸೋಷಿಯಲ್ ಕ್ಲಬ್ ಹಾಗೂ ಕ್ರೀಡಾ ಭವನದಲ್ಲಿ ಬಸವರಾಜ ಹಟ್ಟಿಹೊಳಿ ಗೆಸ್ಟ್ ಹೌಸ್, ಸತೀಶ್ ಜಾರಕಿಹೊಳಿ ಜಿಮ್ ಹಾಗೂ ಪ್ರಭಾಕರ ಕೋರೆ ಸೆಂಟ್ರಲ್ ಹಾಲ್ ಅನ್ನು ಭಾನುವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಸಮಾಜದ ವಿವಿಧ ವರ್ಗದ ವಿವಿಧ ವೃತ್ತಿಯಲ್ಲಿರುವ ಜನ ಒಂದೆಡೆ ಸೇರಿ ನಗರದ ಅಗತ್ಯತೆಗಳ ಬಗ್ಗೆ ಚರ್ಚೆ ಮಾಡುವ ವೇದಿಕೆಯಾಗಿ ಬ್ರಿಟಿಷರ ಕಾಲದಿಂದ ಸೋಷಿಯಲ್ ಕ್ಲಬ್ ರೂಪುಗೊಂಡಿದೆ. ಬೆಳಗಾವಿಯಲ್ಲಿ ಈ ಐತಿಹಾಸಿಕ ಸೋಷಿಯಲ್ ಕ್ಲಬ್ ಗಳು ಈಗಲೂ ಈ ಸದುದ್ದೇಶವನ್ನು ಉಳಿಸಿಕೊಂಡಿರುವುದು ಶ್ಲಾಘನೀಯ ಎಂದು ಬೊಮ್ಮಾಯಿ ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಅನೀಲ ಬೆನಕೆ , ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅಮಿತ್ ಕೋರೆ, ವಿಟಿಯು ಸಿಂಡಿಕೇಟ್ ಸದಸ್ಯ ಆನಂದ ಹಾವನೂರ, ಕ್ಲಬ್ ನ ಕಾರ್ಯದರ್ಶಿ ಅಶೋಕ, ಅಧ್ಯಕ್ಷ ಮುರುಗೇಶ ದದ್ಲಾಪುರ ಇತರರು ಇದ್ದರು.