Kannada NewsLatest

ಮಹಿಳಾ ಮೋರ್ಚಾ ಅಡಿಯಲ್ಲಿ ಆಜಾದಿ ಆಂದೋಲನ ಸಭೆ

ಪ್ರಗತಿವಾಹಿನಿ ಸುದ್ದಿ; ಬೈಲಹೊಂಗಲ: ನಾಡು ನುಡಿ ರಕ್ಷಣೆಗಾಗಿ ಸರ್ವಸ್ವವನ್ನೆಲ್ಲ ಕಳೆದುಕೊಂಡ ಸ್ವಾತಂತ್ರ್ಯ ಹೋರಾಟಗಾರರನ್ನ ದೇಶದಲ್ಲಿ ಸ್ಮರಣೆ ಮಾಡುವ ಕಾರ್ಯ ಪ್ರಧಾನಿ ನರೇಂದ್ರ ಮೊದಿಜಿಯವರ ಅಧಿಕಾರದಲ್ಲಿ ನಡೆಯುತ್ತಿರುವದು ಶ್ಲಾಘನೀಯ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.

75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ರಾಷ್ಟ್ರದ 75 ಅಗ್ರಗಣ್ಯ ಹೋರಾಟಗಾರರ ಸ್ಮರಣೆಗಾಗಿ ರಾಜ್ಯ ಮಹಿಳಾ ಮೊರ್ಚಾ ಅಡಿಯಲ್ಲಿ ರವಿವಾರ ಗಣಾಚಾರಿ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಆಜಾದಿ ಅಂದೋಲನ ಸಭೆಯಲ್ಲಿ ಮಾತನಾಡಿ, ಬ್ರಿಟಿಷ್ ಸರ್ಕಾರದ ವಿರುದ್ದ ದೇಶದದಲ್ಲಿ ಪ್ರಥಮವಾಗಿ ಹೋರಾಡಿದ ವೀರ ಮಹಿಳೆ ಕಿತ್ತೂರು ಚೆನ್ನಮ್ಮನ ಐಕ್ಯಸ್ಥಳದಲ್ಲಿ ನಮನ ಸಲ್ಲಿಸುತ್ತಿರುವ ಭಾಗ್ಯ ಒದಗಿ ಬಂದಿರುವದು ನಮ್ಮೆಲ್ಲರ ಸೌಭಾಗ್ಯ ಎಂದರು.

ರಾಜ್ಯ ಮಹಿಳಾ ಮೊರ್ಚಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ ಮಾತಮಾಡಿ, ವ್ಯಾಪರಕ್ಕಾಗಿ ಬಂದ ಬ್ರಿಟಿಷ್ ರನ್ನ ದೇಶದಿಂದ ಹೊರಹಾಕಲಿಕ್ಕೆ ಲಕ್ಷಾಂತರ ವೀರರು ತಮ್ಮ ಪ್ರಾಣ ತ್ಯಾಗ ಮಾಡಿದ ಫಲದಿಂದ ನಾವೆಲ್ಲ ಸ್ವಾತಂತ್ರ್ಯದ ಅನುಭವ ಅನುಭವಿಸುತಿದ್ದೆವೆ. ಆದರೆ ದೇಶದ ಬೆಳವಣಿಗೆಗೆ ಸಹಕರಿಸಬೇಕಾಗಿದ್ದ ಅನೇಕ ರಾಷ್ಟ್ರೀಯ ಪಕ್ಷಗಳು ಜಾತಿ ರಾಜಕಾರಣದಲ್ಲಿ ಮುಳಗಿ ದೇಶದ ಅಭಿವೃದ್ಧಿಗೆ ಮಾರಕಾವಗಿರುವ ಪರಿಸ್ಥಿತಿಯಲ್ಲಿ ದೇಶದ ಚುಕ್ಕಾಣಿ ಹಿಡಿದ ನರೇಂದ್ರ ಮೋದಿಯವರು ಭಾರತದ ಇತಿಹಾಸದ ಗತ ಚರಿತ್ರೆಯನ್ನು ಹೊರಗೆ ತರುವ ಮೂಲಕ ಯುವ ಪೀಳಿಗೆಗೆ ಪಾರಂಪರಿಕ ಇತಿಹಾಸ ತಿಳಿಸುವ ಮಹತ್ತರ ಕಾರ್ಯ ಮಾಡುತಿದ್ದಾರೆ ಎಂದರು.

ರಾಜ್ಯ ಕಾರ್ಯದರ್ಶಿ ಉಜ್ವಲಾ ಭಡವಣಾಚೆ ಮಾತನಾಡಿ, ವೀರ ಮಾತೆ ಚೆನ್ನಮ್ಮನ ನಾಡಿನಲ್ಲಿ ಜನಿಸಿರುವದೆ ಮಹಿಳೆಯರಿಗೆ ಒಂದು ಹೆಮ್ಮೆ, ಬೈಲಹೊಂಗಲ ಅಮಟೂರು ಬಾಳಪ್ಪ, ಬಿಚಗತ್ತಿ ಚನ್ನಬಸು, ಬೆಳವಡಿ ಮಲ್ಲಮ್ಮ ಕ್ರಾಂತಿ ವೀರ ಸಂಗೊಳ್ಳಿರಾಯಣ್ಣ ಜನಿಸಿದ ಸ್ಥಳದಿಂದ ಬೆಳಗಾವಿ ಜಿಲ್ಲೆಗೆ ಗೌರವ ತಂದು ಕೊಟ್ಟಿದೆ ಎಂದರು

ಮಾಜಿ ಶಾಸಕ, ಕಾಡಾ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾತನಾಡಿ, ಚೆನ್ನಮ್ಮನ ಕಾಲದಲ್ಲಿಯು ಮಲ್ಲಪ್ಪ ಶೆಟ್ಟೆ ಕಲ್ಲಪ್ಪ ಶೆಟ್ಟಿಯ ಕುತಂತ್ರದಿಂದ ಸೋಲು ಅನಭವಿಸಿದರೆ ಇಂದಿನ ಕಾಲದಲ್ಲಿಯು ನಮ್ಮೊಳಗೆ ಅನೇಕ ಇಂತಹ ಕುತಂತ್ರಿಗಳಿದ್ದು ಬಿಜೆಪಿ ಪಕ್ಷ ಸೋಲದಂತೆ ಪಕ್ಷವನ್ನು ಕಟ್ಟುವ ಜವಾಬ್ದಾರಿ ಪ್ರಾಮಾಣಿಕ ಕಾರ್ಯಕರ್ತರ ಮೇಲಿದೆ ಎಂದರು.

ಶ್ರೀದೇವಿ ಅಂಗಡಿ, ಮಹಾನಗರ ಜಿಲ್ಲಾ ಅಧ್ಯಕ್ಷೆ ಸುವರ್ಣಾ ಪಾಟೀಲ, ಸಿ.ಕೆ.ಮೆಕ್ಕೆದ ಮಾತನಾಡಿದರು.
ವೇದಿಕೆಯ ಮೇಲೆ ಮಹಿಳಾ ಮಂಡಳ ಅಧ್ಯಕ್ಷೆ ಶಾಂತ ಮಡ್ಡಿಕರ, ಮಡಿವಾಳಪ್ಪ ಚಳಕೊಪ್ಪ ಜಿಲ್ಲಾ ಉಪಾಧ್ಯಕ್ಷೆ ರತ್ನಾ ಗೋಧಿ, ಗುರುಪಾದ ಕಳ್ಳಿ ಇದ್ದರು.
ಮಹಾದೇವಿ ಕಿತ್ತೂರ, ಸ್ವಾಗತರು ಗೀತಾ ಕೋಳಿ, ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಡಾ.ಸೋನಾಲಿ ಸೋನಾಬರ್ತ, ಮಂಗಲಾ ಕೌಜಲಗಿ, ಕಮಲಾ ಬಡಗಾಂವಿ, ಕರುಣಾ ಗೌಡರಕರ, ವಿದ್ಯಾ ರಾಮಣ್ಣವರ ಶಿಲ್ಪ ಗೋಡಿಗೌಡರ, ಮಹಾದೇವಿ ಹೀರೆಮಠ, ಸ್ನೇಹಲ ಕೊಲೆ, ಬಸವಂತ ಜಮನುರ, ಜಗದೀಶ್ ಮೇಟಿ, ಬಸವರಾಜ ನೇಸರಗಿ, ಮಡಿವಾಳಪ್ಪ ಹೋಟಿ, ಶ್ರೀಕಾಂತ್ ಶಿರಹಟ್ಟಿ, ಪರಪ್ಪ ಬಾಳಿಕಾಯಿ, ಸುರೇಶ ಹೋಳಿ, ಶಿವಾನಂದ ಪೂಜಾರ, ಆದರ್ಶ ಗುಂಡಗಾವಿ ಇತರರು ಇದ್ದರು.

ಗೀತಾ ಕೋಳಿ ಸ್ವಾಗತಿಸಿದರು, ಮಹಾದೇವಿ ಕಿತ್ತೂರ ನಿರೂಪಿಸಿದರು.

ಚೆನ್ನಮ್ಮ ವೃತ್ತದಲ್ಲಿ ಆಶ್ವಾರೋಢ ಚೆನ್ನಮ್ಮನ ಮೂರ್ತಿಗೆ ಮತ್ತು ಎಸ್.ಆರ್.ಸರ್ಕಲ್ ನಲ್ಲಿ ರಾಯಣ್ಣನ ಮೂರ್ತಿಗೆ ಮಾಲಾರ್ಪಣೆ ಮಾಡಿ ಕಾಲನಡೆಗೆಯಲ್ಲಿ ಚೆನ್ನಮ್ಮಾ ಸಮಾಧಿಗೆ ತೆರಳಿ ಸಂಸದೆ ಮಂಗಲಾ ಅಂಗಡಿ ಹಾಗೂ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಪುಷ್ಪ ನಮನ ಸಲ್ಲಿಸಿದರು.

150 ಕೋಟಿ ವೆಚ್ಚದ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ -ಸಚಿವ ಗೋವಿಂದ ಕಾರಜೋಳ 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button