Latest

ಬಾವನ ಹತ್ಯೆ; ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತಂದ ಬಾಮೈದ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೌಟುಂಬಿಕ ಕಲಹ, ಗಂಡ ಹೆಂಡತಿ ನಡುವಿನ ಜಗಳ ಅತಿರೇಕಕ್ಕೆ ತಲುಪಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮೈಸೂರು ಜಿಲ್ಲೆಯ ಗೌಸಿಯಾನಗರದಲ್ಲಿ ನಡೆದಿದೆ.

ಮೊಹಮ್ಮದ್ ಸರಾನ್ (27) ಕೊಲೆಯಾದ ವ್ಯಕ್ತಿ. ಮೊಹಮ್ಮದ್ ಸರಾನ್ ಹಾಗೂ ರೂಬಿಯಾ ಕಳೆದ 5 ವರ್ಷಗಳ ಹಿಂದೆ ವಿವಾಹವಾಗಿದ್ದರು. ಗಂಡ-ಹೆಂಡತಿ ನಡುವಿನ ಮನಸ್ತಾಪ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು.

Home add -Advt

ಪತಿ-ಪತ್ನಿ ಜಗಳ ಹೆಚ್ಚುತ್ತಿದ್ದಂತೆ ರೂಬಿಯಾ ಕುಟುಂಬದವರು, ಸಂಬಂಧಿಕರು ಮಧ್ಯಪ್ರವೇಶ ಮಾಡಿದ್ದಾರೆ. ಇದರಿಂದ ಎರಡು ಕುಟುಂಬಗಳ ಜಗಳ ಅತಿರೇಕಕ್ಕೆ ತಿರುಗಿದೆ. ಕೋಪದ ಬರದಲ್ಲಿ ಬಾಮೈದ ಕದೀರ್ ಬಾವ ಮೊಹಮ್ಮದ್ ನನ್ನು ಕೊಲೆಗೈದು, ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ. ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲಿಬಾನ್ ಉಗ್ರರ ವಶವಾದ ಆಪ್ಘಾನಿಸ್ತಾನ; ಅಧಿಕಾರ ಹಸ್ತಾಂತರ ಘೋಷಿಸಿದ ಆಶ್ರಫ್ ಘನಿ

Related Articles

Back to top button