ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೈಲಹೊಂಗಲ ತಾಲೂಕಿನ ಹೋಗರ್ತಿ ಕ್ರಾಸ್ ಬಳಿ ಅಕ್ರಮವಾಗಿ ಕಳ್ಳಬಟ್ಟಿ ಸರಾಯಿಯನ್ನು ಸಾಗಾಟ ಮಾಡುತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಪೊಲೀಸರು ದಾಳಿ ನಡೆಸಿ, ಬಂಧಿಸಿದ್ದಾರೆ.
ಬೆಳಗಾವಿ ತಾಲೂಕಿನ ಕರವಿನಕುಂಪಿ ಗ್ರಾಮದ ಬಸವರಾಜ ಯಲ್ಲಪ್ಪ ಪೂಜೇರಿ ಬಂಧಿತ ಆರೋಪಿ. ಬೆಳಗಾವಿ-ಬಾಗಲಕೊಟ ಹೆದ್ದಾರಿ ಹೋಗರ್ತಿ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಯಮಾಹಾ ಆರ್ ಎಕ್ಸ್ 100 ಬೈಕ್ ಹಾಗೂ 18,600 ರೂಪಾಯಿ ಮೌಲ್ಯದ 60 ಲೀಟರ್ ಕಳ್ಳಬಟ್ಟಿ ಸರಾಯಿ ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ನೀರಿಕ್ಷಕ ಬಸವರಾಜ ಮುಡಶಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪಿ. ಏನ್. ಸತ್ತೂರ್, ಎ. ಏಸ್. ಜಾಲಿಕಟ್ಟಿ ಹಾಗೂ ಏನ್. ವಾಯ್. ಟಗರಿ ದಾಳಿಯಲ್ಲಿ ಪಾಲ್ಗೊಂಡಿದ್ದರು. ಆರೋಪಿತನ ವಿರುದ್ದ ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಥಣಿ ಬಳಿ ಭೀಕರ ಘಟನೆ: ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆಗೈದು, ಅಭರಣ ದೋಚಿದ ದುಷ್ಕರ್ಮಿ
https://pragati.taskdun.com/latest/terrible-incident-near-athani-criminal-who-broke-into-house-killed-woman-stole-jewelery/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ