ಅಥಣಿ ಬಳಿ ಭೀಕರ ಘಟನೆ: ಮನೆಗೆ ನುಗ್ಗಿ ಮಹಿಳೆಯನ್ನು ಕೊಲೆಗೈದು, ಅಭರಣ ದೋಚಿದ ದುಷ್ಕರ್ಮಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅದೇ ಗ್ರಾಮದ ವ್ಯಕ್ತಿಯೋರ್ವ 2ನೆ ಬಾರಿಗೆಮನೆಗೆ ನುಗ್ಗಿ ಮಹಿಳೆಯ ಕತ್ತು ಹಿಚುಕಿ ಕೊಲೆಗೈದು ಬಂಗಾರದ ಆಭರಣಗಳನ್ನು ಕದ್ದೊಯ್ದಿದ್ದಾನೆ.
ಅಥಣಿ ತಾಲೂಕಿನ ಬೇವನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಈ ಕುರಿತು ಪರಮೇಶ್ವರ ಲಕ್ಷ್ಮಣ ಯಮಗಾರ ಎನ್ನುವವರು ಪೊಲೀಸ ದೂರು ದಾಖಲಿಸಿದ್ದಾರೆ.
ಅವರ ಮಲತಾಯಿಯಾದ ಮುಲಾಬಾಯಿ ಲಕ್ಷ್ಮಣ ಯಮಗಾರ (ವಯಸ್ಸು 65 ವರ್ಷ) ಇವಳು ಬೇವನೂರ ಗ್ರಾಮದಲ್ಲಿ ಮನೆ ಮಾಡಿಕೊಂಡು ಒಬ್ಬಳೆ ಜೀವನ ಸಾಗಿಸುತ್ತಿರುತ್ತಾಳೆ .
ಈಗ 15 ದಿವಸಗಳ ಹಿಂದೆ ಮುಲಾಬಾಯಿ ಮನೆಯ ಬಾಗಿಲ ಒಳ ಚೀಲಕ ಹಾಕಿಕೊಂಡು ಮಲಗಿರುವಾಗ ಬೆಳಗಿನ 1 ಗಂಟೆಗೆ ಸಂಘರ್ಷ ಕುಶಾಬ ಕಾಂಬಳೆ ಈತನು ಬಂದು ಮುಲಾಬಾಯಿ ಇವಳ ಮನೆ ಕಿಡಕಿ ಮುರಿದು ಒಳಗೆ ಬರುವಾಗ ಅದರ ಸಪ್ಪಳಕ್ಕೆ ಎಚ್ಚೆತ್ತ ಮುಲಾಬಾಯಿ ಎದ್ದು ಹೊರಗೆ ಬಂದಾಗ ಆರೋಪಿತನು ನಿಂತಿದ್ದು ರಾತ್ರಿ ವೇಳೆಯಲ್ಲಿ ಇಲ್ಲಿ ಯಾಕೆ ಬಂದೆ ಎಂದು ಪ್ರಶ್ನಿಸಿದಳು. ಅವನು ಪುಲಾಬಾಯಿ ಕೊರಳಲ್ಲಿಯ ಬೋರಮಾಳಕ್ಕೆ ಕೈ ಹಾಕಿದಾಗ ಅವಳು ಚೀರಾಡಲು ಆಜು ಬಾಜು ಜನರು ಬಂದರು. ಆಗ ಅವನು ಓಡಿ ಹೋಗಿದ್ದನು.
ದಿನಾಂಕ 19-10-2022 ರಂದು 22-00 ರಿಂದ 20-10-2022 ರಂದು 10-45 ಗಂಟೆಯ ನಡುವಿನ ಅವಧಿಯಲ್ಲಿ ಇದರಲ್ಲಿಯ ಆರೋಪಿ ಸಂಘರ್ಷ ತಂದೆ ಕುಶಾಬ ಕಾಂಬಳೆ, ಬೇವನೂರ ಇತನು ಮುಲಾಬಾಯಿ ಇವಳ ಮನೆಗೆ ಬಂದು ಮನೆ ಕಿಡಕಿ ಬಾಗಿಲ ಮುರಿದು ಒಳಗೆ ಹೊಕ್ಕು ಅವಳ ಕೊರಳಲ್ಲಿಯ ಬಂಗಾರದ ಬೊರಮಾಳನ್ನು ಕಿತ್ತುಕೊಂಡು ಪುಲಾಬಾಯಿ ಇವಳ ಬಾಯಿ ಮತ್ತು ಮೂಗಿಗೆ ಅರಿವೆಯಿಂದ ಒತ್ತಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರೂು ತನಿಖೆ ಕೈಕೊಂಡಿದ್ದಾರೆ.
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ: ಮತ್ತೆ 6 ಆರೋಪಿಗಳ ಬಂಧನ
https://pragati.taskdun.com/latest/kptcl-exam-scandal6-accusedarrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ