
ಬೈಲಹೊಂಗಲ ಪೊಲೀಸರ ಕಾರ್ಯಾಚರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಎರಡು ಪ್ರಕರಣಗಳಲ್ಲಿ ಮಹಿಳೆಯರ ಸರಗಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬೈಲಹೊಂಗಲ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಗೋಕಾಕ ತಾಲೂಕಿನ ಬೆನಚಮರ್ಡಿ ಗ್ರಾಮದ ಬಸವರಾಜ ಸಿದ್ದಪ್ಪ ಗೋಧಿ (30), ಸಿದ್ದಾರೂಡ ಮಾಯಪ್ಪ ಧರ್ಮಟ್ಟಿ (22), ಮುತ್ತೆಪ್ಪ ವಿಠಲ ಕಿಲಾರಿ (25), ಬಸವರಾಜ ಬೀರ ಸಿದ್ದಪ್ಪ ಪೂಜೇರಿ (26) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 12.5 ಗ್ರಾಮದ ಬಂಗಾರದ ಚೈನ್, 50 ಗ್ರಾಂ ಬಂಗಾರ ದ ಗಂಟೆನ, ಹಾಗೂ ಬಂಗಾರ ದ ಎರಡು ಎಳೆ ಸರ, ಹಾಗೂ ಕೃತ್ಯಕ್ಕೆ ಬಳಸಿ ದ ಬೈಕ್ ಸೇರಿ ಒಟ್ಟು ರೂ. 6.70 ಲಕ್ಷ ಮೌಲ್ಯ ದ ಬಂಗಾರದ ಆಭರಣ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಕಳ್ಳರ ಪತ್ತೆ ಮಾಡಿದ ಬೈಲಹೊಂಗಲ ಪೊಲೀಸರ ಕಾರ್ಯಕ್ಕೆ ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ ಸಿಬ್ಬಂದಿಗಳ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.