Kannada NewsLatestWorld

*ಮಗನ ಸಾವಿನ ಬಳಿಕ ಬಿಎಂಡಬ್ಲ್ಯೂ ಕಾರ್ ಸಮಾಧಿ ಮಾಡಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ಪುತ್ರನ ಸಾವಿನ ಶೋಕದಲ್ಲಿದ್ದ ತಂದೆ ಆತನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ನೀಡಿದ್ದ 6 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯೂ ಕಾರನ್ನು ಸಮಾಧಿ ಮಾಡಿದ್ದಾರೆ.

ರಷ್ಯಾದ ಮಾಸ್ಕೋದಲ್ಲಿ ಈ ಘಟನೆ ನಡೆದಿದೆ. ಮಗನ ಸಾವಿನ ನಂತರ ತಂದೆ ಬಿಎಂಡಬ್ಲ್ಯೂ ಕಾರನ್ನು  ಕಾಂಕ್ರಿಟ್ ಹಾಕಿ ಸಮಾಧಿ ಮಾಡುತ್ತಿರುವ ಭಾವನಾತ್ಮಕ ದೃಶ್ಯದ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Home add -Advt

ತಂದೆ ತನ್ನ ಮಗನಿಗೆ ಬರ್ತ್‌ಡೇ ಗಿಫ್ಟ್‌ ಆಗಿ ಬಿಎಂಡಬ್ಲ್ಯೂ ಕಾರು ನೀಡಿದ್ದರು. ಆದರೆ, ಕೆಲವೇ ದಿನಗಳ ನಂತರ ಮಗ ಮೃತಪಟ್ಟಿದ್ದಾನೆ. ಆ ಕಾರು ನೋಡಿದಾಗಲೆಲ್ಲ ಪುತ್ರನ ನೆನೆದು ತಂದೆ ಶೋಕಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಕಾರನ್ನು ಸಮಾಧಿ ಮಾಡಿದ್ದಾರೆ

ವ್ಯಕ್ತಿಯ ನಡೆಗೆ ಅನೇಕ ನೆಟ್ಟಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಆ ಕಾರನ್ನು ಮಾರಿ ಬಂದ ಹಣವನ್ನು ಯಾವುದಾದರು ದತ್ತಿ ಸಂಸ್ಥೆಗಳಿಗೆ ನೀಡಬಹುದಿತ್ತು’ ಎಂದು ಕೆಲವರು ಹೇಳಿದ್ದಾರೆ. ‘ಕಾರನ್ನು ಮಾರಾಟ ಮಾಡಿ ಆ ಹಣವನ್ನು ನಿರ್ಗತಿಕರಿಗೆ ದಾನ ಮಾಡಬಹುದಿತ್ತು’ ಎಂದು ವ್ಯಕ್ತಿಯ ಈ ನಿರ್ಧಾರದ ಬಗ್ಗೆ ಪರ-ವಿರೋಧದ ಕಾಮೆಂಟ್‌ಗಳು ಹರಿದುಬರುತ್ತಿವೆ.

Related Articles

Back to top button