ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ಕಾಂಗ್ರೆಸ್ ಪಕ್ಷವು ತಮ್ಮ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸಲಾಗುವುದು ಎಂದು ಘೋಷಿಸಿರುವುದಕ್ಕೆ ಸ್ಥಳೀಯ ಬಜರಂಗ ದಳದ ಕಾರ್ಯಕರ್ತರು ರಸ್ತೆಯಲ್ಲಿ ಹನುಮಾನ ಚಾಲಿಸಾ ಪಠಿಸುವ ಮೂಲಕ ಅದನ್ನು ಖಂಡಿಸಿದರು.
ಇಲ್ಲಿನ ಸಾಖರವಾಡಿಯ ಹನುಮಾನ ಮಂದಿರದ ಎದುರು ಶನಿವಾರ ಹಳೆಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ಬಜರಂಗಿಗಳು ಹನುಮಾನ ಚಾಲಿಸಾ ಪಠಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಸ್ಥಳೀಯ ವಿರೂಪಾಕ್ಷಲಿಂಗ ದೇವಸ್ಥಾನದ ಪ್ರಾಣಲಿಂಗ ಸ್ವಾಮೀಜಿ, ಸದಲಗಾ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಬಜರಂಗ ದಳದ ಕರ್ನಾಟಕ ಉತ್ತರ ಪ್ರಾಂತ ಸಾಪ್ತಾಹಿಕ ಮಿಲನ ಪ್ರಮುಖ ವಿಠ್ಠಲ್ ಮಾಳಿ ಹನುಮಾನ ಚಾಲಿಸಾ ಪಠಿಸಿಕೊಂಡರು.
ಧೀರಜಕುಮಾರ, ರಾಮಜಿ ಬಿಸ್ವಾಸ, ಕೃಷ್ಣಾ ದೇವನಗೋಳ, ಡಾ. ಅಜೀತ ಗೋಪಚಾಳ, ಮೊದಲಾದವರು ಸಹಿತ ಅಪಾರ ಬಜರಂಗಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ