Kannada NewsKarnataka News

20 ಮತಗಟ್ಟೆಗಳಿಗೆ ಬಹುಮಾನ ಘೋಷಣೆ ಮಾಡಿದ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಅತೀ ಹೆಚ್ಚಿನ ಮತ ಹಾಕಿದ ಬೂತ್ ಗಳಿಗೆ ಬಹುಮಾನ ನೀಡಲು ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನಿರ್ಧರಿಸಿದ್ದಾರೆ.

ಅವರು ಇತಿಹಾಸದಲ್ಲೇ ಮೊದಲಬಾರಿಗೆ ದೊಡ್ಡ ಪ್ರಮಾಣದಲ್ಲಿ ಮತಗಳನ್ನು ಪಡೆದು ಗೆದ್ದ ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಇದೇ ಮೊದಲ ಬಾರಿಗೆ 1.15 ಲಕ್ಷ ಮತಗಳನ್ನು ಪಡೆದು ಗಲ್ಲಿಸಿದ್ದೀರಿ. 73 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿದ್ದೀರಿ. ಎಲ್ಲ ಸಮಾಜದವರು ನನಗೆ ಮತ ಹಾಕಿದ್ದರಿಂದ ಈ ದೊಡ್ಡ ಪ್ರಮಾಣದ ಗೆಲುವು ಸಾಧ್ಯವಾಗಿಜದೆ. ರಾಜ್ಯದ 223 ಕ್ಷೇತ್ರದಲ್ಲಿ ಎಲ್ಲರೂ ಅಪಾರ ಶ್ರಮ ವಹಿಸಿ ಪ್ರಚಾರಮಾಡಿದ್ದಾರೆ. ಸ್ಟೇಜ್ ಹತ್ತಲೂ ಸಾಧ್ಯವಿಲ್ಲದಷ್ಟು ಸುಸ್ತಾಗಿದ್ದಾರೆ. ನಾನು ಮಾತ್ರ ಬಹಳ ಆರಾಮವಾಗಿ ಚುನಾವಣೆ ಎದುರಿಸಿದ್ದೇನೆ. ಹಾಗಾಗಿ ಇಂತಹ ಮತದಾರರನ್ನು ಪಡೆದ ನಾನೇ ಪುಣ್ಯವಂತ ಎಂದು ಅವರು ಹೇಳಿದರು.

ಹೊಸಟ್ಟಿ ಬೂತ್ ನಲ್ಲಿ ಶೇ.92ರಷ್ಟು ಜನರು ನನಗೆ ಮತ ಹಾಕಿದ್ದಾರೆ. ಕೇವಲ 15 ಮತಗಳು ನನ್ನ ವಿರುದ್ಧ ಬಂದಿವೆ. ಇನ್ನೂ ಹಲವು ಮತಗಟ್ಟೆಗಳಲ್ಲಿ ಶೇ.90, ಶೇ.88 ಹೀಗೆ ಮತಗಳು ಬಿದ್ದಿವೆ. ಹೆಚ್ಚಿನ ಮತಗಳು ಬಿದ್ದಿರುವ 20 ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ಶೀಘ್ರದಲ್ಲೇ ಬಹುಮಾನ ನೀಡಲು ನಿರ್ಧರಿಸಲಾಗಿದೆ. ಸಮಾರಂಭ ಮಾಡಿ ಬಹುಮಾನ ಕೊಡಲಾಗುವುದು ಎಂದು ಪ್ರಕಟಿಸಿದರು.

ಒಳಗಿನಿಂದ ಬಹಳ ಕೆಲಸ ಮಾಡಿದ್ದಾರೆ. ಆದರೆ ಜನರು, ಕಾರ್ಯಕರ್ತರು ಅದಕ್ಕೆಲ್ಲ ಕಿವಿಗೊಡಲಿಲ್ಲ. ವಿರೋಧಪಕ್ಷದಲ್ಲಿದ್ದರೂ ನಾನು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಯಾರಿಗೂ ನಾನು ಕೆಟ್ಟದ್ದು ಮಾಡಿಲ್ಲ. ಆದರೆ ಕೆಲವು ಸಮಾಜದವರು ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರನ್ನೂ ಕೂಡಿಕೊಂಡು ಮತ್ತೆ ನಮ್ಮ ಪರವಾಗಿ ಕೆಲಸ ಮಾಡುವಂತೆ ಮಾಡೋಣ ಎಂದು ಹೇಳಿದರು.

ಜಾತ್ರೆ ಹೆಸರು ಹೇಳಿ ಬಹಳಷ್ಟು ಜನ ನಮ್ಮ ಕಚೇರಿಗೆ ಬಂದು ಹಣ ಪಡೆದು ಹೋಗುತ್ತಾರೆ. ಆದರೆ ಹೆಚ್ಚಿನದು ಬೋಗಸ್ ಎಂದು ಗೊತ್ತಾಗಿದೆ. ಹಾಗಾಗಿ ಇನ್ನು ಮುಂದೆ ಹಣ ಕೊಡುವ ವ್ಯವಸ್ಥೆ ಬದಲು ಮಾಡುತ್ತೇನೆ. ಆಯಾ ಊರಿಗೆ ತೆರಳಿ ಜನರನ್ನು, ದೇವಸ್ಥಾನ ಕಮಿಟಿ ಜನರನ್ನು ಸೇರಿಸಿ ಹಣ ಕೊಡಲಾಗುವುದು. ಮುಂದಿನ ದಿನಗಳಿಂದ ಎಲ್ಲ ವ್ಯವಸ್ಥೆ ಬದಲಿಸಲಾಗುವುದು ಎಂದು ಅವರು ತಿಳಿಸಿದರು.

ಶಾಸಕನಾದ ನನಗೆ ಬೇಕಾದ ರೀತಿಯಲ್ಲಿ ಟೀಕೆ ಮಾಡಲಿ. ವಯಕ್ತಿಕವಾಗಿ ಮತ್ತು ನಮ್ಮ ಕುಟುಂಬಕ್ಕೆ ಇನ್ನು ಮುಂದೆ ಟೀಕೆ ಮಾಡಿದರೆ ಬಿಡುವುದಿಲ್ಲ. ನಿಮ್ಮ ಮನೆಗೇ ಬರುತ್ತೇವೆ. ಅಲ್ಲೇ ನೀವು ಉತ್ತರ ಕೊಡಬೇಕು. ಇಲ್ಲವಾದಲ್ಲಿ ಸರಿಯಾಗಿ ಬುದ್ದಿ ಕಲಿಸುತ್ತೇವೆ. ನಮ್ಮದೋ ಅವರದ್ದೋ ನೋಡೇ ಬಿಡೋಣ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಗಳನ್ನು ಮಾಡುವವರಿಗೆ ಬಾಲಚಂದ್ರ ಜಾರಕಿಹೊಳಿ ಎಚ್ಚರಿಸಿದರು.

https://pragati.taskdun.com/climax-stage-cm-selection-dk-sivakumar-left-for-delhi-dkeshi-said-he-told-me-to-come-alone/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button