ಫೆಬ್ರವರಿ 1ರಿಂದ ಬೆಳಗಾವಿಯಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ… ಎಲ್ಲರಿಗೂ ನಮಸ್ಕಾರ ಎಂದ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಮಿತಾ ಶಾ ಬಂದು ಸಭೆ ಮಾಡಿದ್ದು ಬಹಳ ಒಳ್ಳೆಯದಾಗಿದೆ. ಫೆಬ್ರವರಿ 1ರಿಂದ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ. ಎಲ್ಲ ನಾಯಕರು ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡಲಿದ್ದಾರೆ ಎಂದು ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿಯ ಖಾಸಗಿ ಹೊಟೆಲ್ ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸಿದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಯಡಿಯೂರಪ್ಪ, ಪ್ರಹ್ಲಾದ ಜೋಶಿ, ನಳೀನ್ ಕುಮಾರ ಕಟೀಲು, ಅರುಣ ಸಿಂಗ್ ಎಲ್ಲರೂ ಬೆಳಗಾವಿಯಲ್ಲಿ ಹೆಚ್ಚಿನ ಸೀಟ್ ಗೆಲ್ಲಲು ಅವಕಾಶವಿದೆ. ಒಟ್ಟಾಗಿ ಕೆಲಸ ಮಾಡಿ ಎಂದಿದ್ದಾರೆ. ವ್ಯತ್ಯಾಸ ಮರೆತು ಪಾರ್ಟಿ ಕೆಲಸ ಮಾಡುತ್ತೇವೆ. ಭಾರತೀಯ ಜನತಾ ಪಾರ್ಟಿಯೇ ನಮಗೆ ಲೀಡರ್. ಎಲ್ಲರೂ ಕೂಡಿ ಬಿಜೆಪಿ ಲೀಡರ್ ಶಿಪ್ ನಲ್ಲಿ ಕೆಲಸ ಮಾಡುತ್ತೇವೆ. ಫೆಬ್ರವರಿ 1ರಿಂದ ಜಿಲ್ಲೆಯಲ್ಲಿ ಒಳ್ಳೆಯ ಬೆಳವಣಿಗೆ ಆಗಲಿದೆ ಎಂದು ಅವರು ಹೇಳಿದರು.
ಕೆಲವರಲ್ಲಿ ಭಿನ್ನಾಭಿಪ್ರಾಯವಿರಬಹುದು. ಎಲ್ಲರಲ್ಲೂ ಇಲ್ಲ. ಆದರೆ ಅಮಿತಾ ಶಾ ಸಭೆಯ ನಂತರ ಖಂಡಿತ ಒಳ್ಳೆಯದಾಗುತ್ತದೆ. ಬಹಳ ವಿಚಾರ ಚರ್ಚೆಯಾಗಿದೆ. ಬೆಗಾವಿ ಜಿಲ್ಲೆಗೆ ಇದು ಒಳ್ಳೆಯ ಬೆಳವಣಿಗೆ. ಎಲ್ಲರ ಅಭಿಪ್ರಾಯ ಕೇಳಿದ್ದಾರೆ. ಫೆಬ್ರವರಿ ಒಂದರಿಂದ ಎಲ್ಲರೂ ಒಂದಾಗಿ ಕೆಲಸ ಮಾಡಿ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.
ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಈ ಹಿಂದೆ ನಳಿನ್ ಕುಮಾರ ಕಟೀಲು ಹೇಳಿದ್ದರಲ್ಲ ಎನ್ನುವ ಪ್ರಶ್ನೆ ಕೇಳುತ್ತಿದ್ದಂತೆ ಎಲ್ಲರಿಗೂ ನಮಸ್ಕಾರ ಎನ್ನುತ್ತ ನಗುತ್ತಲೇ ಹೊರಟುಬಿಟ್ಟರು ಚಾಣಾಕ್ಷ ಬಾಲಚಂದ್ರ ಜಾರಕಿಹೊಳಿ.
ಬೆಳಗಾವಿ ಬಿಜೆಪಿ ಭಿನ್ನಮತ ಶಮನಕ್ಕೆ ಅಮಿತ್ ಶಾ ತಂತ್ರವೇನು?
https://pragati.taskdun.com/what-is-amitas-strategy-to-calm-the-belgaum-bjp-dissent/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ