Kannada NewsKarnataka NewsLatestNationalPolitics

*ಬಲೂಚಿಗಳ ವಶವಾಯ್ತು ಪಾಕಿಸ್ತಾನದ ಕ್ವೆಟ್ಟಾ ಪ್ರದೇಶ: ಪಲಾಯನ ಮಾಡಿದ ಪಾಕಿಸ್ತಾನಿ ಆರ್ಮಿ*

ಪ್ರಗತಿವಾಹಿನಿ ಸುದ್ದಿ: ಒಂದು ಕಡೆಯಿಂದ ಪಾಕಿಸ್ತಾನದ ಮೇಲೆ ಭಾರತ ಪ್ರತಿದಾಳಿ ಮಾಡುತ್ತಿದ್ದರೆ ಮತ್ತೊಂದು ಕಡೆಯಿಂದ ಬಲೂಚ್ ಲಿಬರೇಷನ್ ಆರ್ಮಿಯ ಯೋಧರು ಪಾಕಿಸ್ತಾನಕ್ಕೆ ನರಕದ ರುಚಿ ತೋರಿಸುತ್ತಿದ್ದರೆ.

ಗಡಿಯಲ್ಲಿ ಭಾರತದ ಯೋಧರ ಗುಂಡಿಗೆ ಸಿಕ್ಕಿ ಪಾಕಿಗಳು ಪುಡಿಯಾಗುತ್ತಿರುವ ಹೊತ್ತಿನಲ್ಲಿಯೇ ಪಾಕಿಸ್ತಾನದ ಒಳಗಿನಿಂದ ಬಲೂಚಿಗಳು ತಮ್ಮ ಪ್ರತ್ಯೇಕತಾವಾದದ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಬಲೂಚ್ ಲಿಬರೇಷನ್ ಆರ್ಮಿಯ ಕೆಚ್ಚೆದೆಯ ಹೋರಾಟಕ್ಕೆ ಪಾಕಿಸ್ತಾನಿಗಳು ಯುದ್ಧರಂಗದಿಂದ ಪಲಾಯನಗೈದಿದ್ದು, ಕ್ವೆಟ್ಟಾ ಪ್ರದೇಶ ಈಗ ಬಲೂಚಿಗಳ ವಶವಾಗಿದೆ.

ಈ ಸಂದರ್ಭವನ್ನು ಬಲೂಚಿಗಳಿಗೆ ಸುವರ್ಣಾವಕಾಶ ಎಂದು ಕರೆಯಲಾಗುತಿದ್ದು ಸಂಪೂರ್ಣ ಬಲೂಚಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಸ್ವಾತಂತ್ರ್ಯ ಘೋಷಿಸಿಕೊಳ್ಳುವ ಸಾಧ್ಯತೆಯಿದೆ. 

ಭಾರತವೂ ಸಹ ಬಲೂಚಿಗಳ ಈ ಪ್ರಯತ್ನಕ್ಕೆ ಪರೋಕ್ಷ ಬೆಂಬಲ ಸೂಚಿಸುತ್ತಿದ್ದು ಬಲೂಚಿ ಯೋಧರು ಪಾಕಿಗಳನ್ನು ಓಡಿಸಿರುವುದು ಖಚಿತವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button