National

*ಪಾಕಿಸ್ತಾನದ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ*

ಪಠಾಣ್ ಕೋಣ್, ಅಮೃತಸರ್ ವಾಯುನೆಲೆ ಮೇಲೆ ಪಾಕ್ ದಾಳಿ

ಪ್ರಗತಿವಾಹಿನಿ ಸುದ್ದಿ: ಭಾರತ-ಪಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನ ಸೇನೆ ಭಾರತದ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ.

ಪಾಕಿಸ್ತಾನ ಸೆನೆ ಪಠಾಣ್ ಕೋಟ್, ಅಮೃತಸರ್ ವಾಯುನೆಲೆ ಮೇಲೆ ಅಪ್ರಚೋದಿತ ಡ್ರೋನ್ ದಾಳಿ ನಡೆಸಿದ್ದು ಭಾರತೀಯ ಸೇನೆಯ ಸುದರ್ಶನ ಚಕ್ರ S-400, ಆಕಾಶ್ ಯುದ್ಧ ವಿಮಾನಗಳು ಪಾಕಿಸ್ತಾನದ 8 ಕ್ಷಿಪಣಿಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿವೆ.

ಜಮ್ಮುವಿನ ಯುನಿವರ್ಸಿಟಿ, ಜಮ್ಮು ಏರ್ ಪೋರ್ಟ್ ಬಳಿಯೂ ಪಾಕಿಸ್ತಾನ ದಾಳಿ ನಡೆಸಿದೆ. ಪಾಕಿಸ್ತಾನದ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿದೆ. ಪಾಕ್ ದಾಳಿಯಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ತಿಳಿದುಬಂದಿದೆ.

ಜಮ್ಮುವಿನಾದ್ಯಂತ ಯುದ್ಧದ ಸೈರನ್ ಮೊಳಗಿದ್ದು, ಜನರು ಭಯ-ಭೀತರಾಗಿದ್ದಾರೆ. ಪಾಕಿಸ್ತಾನದ ದಾಳಿ ತಡೆಯುವ ನಿಟ್ಟಿನಲ್ಲಿ ಜಮ್ಮುವಿನಾದ್ಯಂತ ಬ್ಲ್ಯಾಕ್ ಔಟ್ ಜಾರಿ ಮಾಡಲಾಗಿದೆ. ಈ ಮೂಲಕ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದ್ದು, ಮನೆಗಳ ಬಾಗಿಲು, ಕಿಡಕಿ ತೆರೆಯದಂತೆ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಇದರ ಬೆನ್ನಲ್ಲೇ ಭಾರತದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button