
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಿರಂತರ ಮಳೆಯಿಂದ ಎಲ್ಲಡೆ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸುತ್ತಿದ್ದು, ಬೆಳಗಾವಿ ನಗರಕ್ಕೆ ಹಾಗೂ ಖಾನಾಪೂರ ಪಟ್ಟಣಕ್ಕೆ ತೆರಳುವ ಭಾರಿ ವಾಹನಗಳಿಗೆ ನಿಷೇಧ ಹೇರಲಾಗಿದೆ
ಖಾನಾಪೂರ ತಾಲೂಕಿನ ಜಾಂಬೋಟಿಯಿಂದ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಜಾಂಬೋಟಿ -ಪೀರಣವಾಡಿ ರಸ್ತೆ (ರಾಷ್ಟ್ರೀಯ ಹೆದ್ದಾರಿ 54) ಭಾರಿ ವಾಹನಕ್ಕೆ ನಿಷೇಧ ಹಾಗೂ ಜಾಂಬೋಟಿಯಿಂದ ಖಾನಾಪೂರಕ್ಕೆ ಸಂಪರ್ಕ ಕಲ್ಪಿಸುವ (ರಾಜ್ಯ ಹೆದ್ದಾರಿ 31) ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಸಮಯ ನಿಗದಿಪಡಿಸಿದ ಆದೇಶ ಹೊರಡಿಸಲಾಗಿದೆ. ಖಾನಪೂರದಿಂದ ಜಾಂಬೋಟಿಗೆ ಭಾರಿ ವಾಹನಗಳು ಏಕಮುಖವಾಗಿ ಸಂಚರಿಸಲು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಹಾಗೂ ಜಾಂಬೋಟಿಯಿಂದ ಖಾನಪೂರಕ್ಕೆ ಏಕಮೂಖವಾಗಿ ಸಂಚರಿಸಲು ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 8 ಗಂಟೆಗಳವರೆಗೆ ಸಮಯ ನಿಗದಿ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ