ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೊಂಕು ದಿನೇ ದಿನೇ ಹೆಚ್ಚುತ್ತಿದ್ದು, ಖಾಕಿ ಪಡೆಗಳಿಗೂ ಸೋಂಕು ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ 50 ವರ್ಷ ಮೇಲ್ಪಟ್ಟ ಪೊಲೀಸರು ಠಾಣೆಗೆ ಬರದಂತೆ ಆದೇಶಿಸಿದ್ದಾರೆ.
ಯಾರಿಗಾದರೂ ಆರೋಗ್ಯದ ಬಗ್ಗೆ ಅನುಮಾನವಿದ್ದಲ್ಲಿ ಕೂಡಲೇ ಕೋವಿಡ್-19 ಟೆಸ್ಟ್ ಮಾಡಿಸುವಂತೆ ನಿರ್ದೇಶಿಸಿದ್ದಾರೆ. ಅಲ್ಲದೇ ನಗರ ಪೊಲೀಸ್ ಠಾಣೆಗಳಿಗೆ ಹಲವು ಸೂಚನೆ ರವಾನೆ ಮಾಡಿದ್ದಾರೆ.
* ಸಮಸ್ಯೆ ಏನೇ ಬಂದ್ರು ಧೈರ್ಯವಾಗಿ ಎದುರಿಸಬೇಕು. ಗಾಬರಿಯಾಗಬೇಡಿ, ಸರ್ಕಾರ ಸಮಾಜ ನಮ್ಮನ್ನ ನಂಬಿದೆ. ಎಲ್ಲಾ ಸ್ಟೇಷನ್ನಲ್ಲಿ 55 ವರ್ಷ ಮೇಲ್ಪಟ್ಟವರು ಮನೆಯಲ್ಲಿ ಇರಬೇಕು. ಬೆಂಗಳೂರು ಬಿಡುವಂತಿಲ್ಲ. ಅಧಿಕಾರಿಗಳು ಮಾನಿಟರ್ ಮಾಡಬೇಕು.
* ಸಾಧ್ಯವಾದಷ್ಟು ಯುವ ಹೋಂ ಗಾರ್ಡ್ ಬಳಕೆ ಮಾಡಿಕೊಳ್ಳಿ. ಜಂಟಿ ಸಿಪಿ ಡಿಸಿಪಿಗಳು ಮಾರ್ಗದರ್ಶನ ಮಾಡ್ತಾರೆ.
* ಶಾಮಿಯಾನ ಹಾಕಿಕೊಂಡು ಠಾಣೆ ಹೊರಗಡೆ ಅಲ್ಲೆ ವಿಲೇವಾರಿ ಮಾಡಬೇಕು. ಆರೋಪಿಗಳು ಇರಲಿ, ಯಾರೇ ಅಗಲಿ, ಯಾರನ್ನೂ ಟಚ್ ಮಾಡುವಂತಿಲ್ಲ.
* ಹೊಯ್ಸಳ ಮತ್ತು ಚೀತಾ ಅನವಶ್ಯಕವಾಗಿ ಸುತ್ತಾಡಬಾರದು. ಸಮಸ್ಯೆ ಇದ್ರೆ ಕಾಲ್ ಬಂದ್ರೆ ಹೋಗಬೇಕು, ಸುಮ್ಮನೆ ಸ್ಟೇಷನ್ಗೆ ಬರಬಾರದು.
* ಮುಖ್ಯ ಕೇಸ್ಗಳಲ್ಲಿ ಮಾತ್ರ ಆರೋಪಿಗಳನ್ನ ಬಂಧಿಸಬೇಕು.
* ಪ್ರತಿ ಠಾಣೆಯಲ್ಲಿ ಬಿಸಿ ನೀರಿನ ವ್ಯವಸ್ಥೆ ಇರಬೇಕು. ಕುಡಿಯಲು, ಸ್ನಾನ, ಕೈಕಾಲು ತೊಳೆಯಲು, ಮಾಸ್ಕ್ ಸ್ಯಾನಿಟೈಸರ್, ಫೇಸ್ ಶೀಲ್ಡ್ ಇರಬೇಕು.
* ನಾವು ಉಪಯೋಗಿಸುವ ವಾಹನಗಳು ಪ್ರತಿದಿನ ಸ್ಯಾನಿಟೈಸ್ ಆಗಬೇಕು. ಬೆಂಕಿ ಅನಾಹುತ ಆಗದಂತೆ ಸ್ಯಾನಿಟೈಸ್ ಮಾಡಬೇಕು. ನಾವು ಕ್ವಾರಂಟೈನ್ ಆಗಿದ್ದೀವಿ ಅಂತ ಸಾರ್ವಜನಿಕರಿಗೆ ನಮ್ಮ ಸೇವೆಯಿಂದ ಕೊರತೆ ಆಗಬಾರದು.
* ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸಬೇಕು, ಗ್ಲೌಸ್ ಹಾಕಬೇಕು, ದೂರದಲ್ಲಿ ನಿಂತು ಮಾತನಾಡಬೇಕು.
* ಎಂಒಬಿ ಕಾರ್ಡ್ ಬಂಧಿಸೋದು ಬೇಡ, ತಾಂತ್ರಿಕವಾಗಿ ಅವರ ಮೇಲೆ ನಿಗಾ ಇಟ್ಟಿರಿ. ಅವರ ಮೇಲೆ ಇನ್ನೂ ನಿಗಾ ಹೆಚ್ಚಾಗಿರಬೇಕು. ನಾವು ಸುಮ್ಮನೆ ಇದ್ದೀವಿ ಅಂತ ಸಮಾಜಘಾತುಕ ಶಕ್ತಿಗಳಿಗೆ ಅವಕಾಶ ಕೊಡಬಾರದು, ಇನ್ಸ್‌ಪೆಕ್ಟರ್, ಪಿಎಸ್ಐಗಳು ಗಮನ ಇಡಬೇಕು.
* ಮುಖ್ಯ ಕಾರ್ಯದರ್ಶಿಗಳು ಇಲಾಖೆಗೆ ಎಲ್ಲಾ ನೆರವು ನೀಡೊ ಬಗ್ಗೆ ಹೇಳಿದ್ದಾರೆ. ಹಾಗೂ ಪೊಲೀಸ್ ಕ್ವಾಟ್ರಸ್ ಗಳಲ್ಲಿ ಸ್ವಚ್ಚತೆ ಇರಬೇಕು, ಎಲ್ಲ ಮನೆಗಳಿಗೆ ಸ್ಯಾನಿಟೈಸರ್, ಮಾಸ್ಕ್ ಕೊಡಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ