Kannada NewsKarnataka NewsLatest

*ದೊಡ್ಡ ದೊಡ್ಡ ಅಂಗಡಿಗಳೇ ಇವರ ಟಾರ್ಗೆಟ್; ಲಕ್ಷಾಂತರ ರೂಪಾಯಿ ಸೀರೆ ಕದಿಯುತ್ತಿದ್ದ ಗ್ಯಾಂಗ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕದುಯುತ್ತಿದ್ದ ಮಹಿಳೆಯರ ಖತರ್ನಾಕ್ ಗ್ಯಾಂಗ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಗುಂಟೂರು ಮೂಲದ ರಮಣ, ರತ್ನಾಲು, ಚುಕ್ಕಮ್ಮ ಬಂಧಿತ ಮಹಿಳೆಯರು. ಕೆಲ ದಿನಗಳ ಹಿಂದೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿಯೂ ಇಂತದ್ದೇ ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು.

ಸ್ಕಾರ್ಪಿಯೋ ವಾಹನದಲ್ಲಿ ಬಂದು ಶ್ರೀಮಂತರಂತೆ ನಟಿಸಿ, ದೊಡ್ಡ ದೊಡ್ಡ ಸೀರೆ ಶೋ ರೂಂ ಗಳಿಗೆ ತೆರಳಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳನ್ನು ತೆಗೆಸಿ ನೋಡುತ್ತಿದ್ದರು. ಮನೆಯಲ್ಲಿ ಮದುವೆ ಸಮಾರಂಭವಿದೆ. ಹಾಗಾಗಿ ಲಕ್ಷಾಂತರ ರೂಪಾಯಿ ಸೀರೆ ಬೇಕು ಎಂದು ಹೇಳಿ ಸೀರೆಗಳನ್ನು ನೋಡುತ್ತಿದ್ದರು. ಕೆಲ ಸೀರೆ ನೋಡಿದ ಬಳಿಕ ಈ ಸೀರೆ ಬೇಡ ಇನ್ನಷ್ಟು ರೇಟಿನ ಬೇರೆ ಸೀರೆ ತೋರಿಸುವಂತೆ ಹೇಳುತ್ತಿದ್ದರು. ಅಂಗಡಿ ಸಿಬ್ಬಂದಿ ಬೇರೆಸೀರೆ ತರಲು ಒಳಗೆ ಹೋದಾಗ ಇಲ್ಲಿದ್ದ ಸೀರೆಗಳನ್ನು ತಾವು ಉಟ್ಟುಕೊಂಡು ಬಂದಿರುವ ಸೀರೆಯೊಳಗೆ ಸೇರಿಸುತ್ತಿದ್ದರು.

ಹೀಗೆ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಯನ್ನು ಕದ್ದು ಹೋಗುತ್ತಿದ್ದಾಗ ಮಹಿಳೆಯ ಕಾಲಿನ ಬಳಿ ಒಂದು ಸೀರೆ ಬಿದ್ದಿದೆ. ಇದನ್ನು ಗಮನಿಸಿದ ಸೆಕ್ಯುರಿಟಿ ಅನುಮಾನಗೊಂಡು ಮಾಲೀಕನಿಗೆ ದೂರು ನೀಡಿದ್ದರು. ಮಾಲೀಕ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಸೀರೆ ಕದ್ದಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಸೀರೆ ಕದಿಯುತ್ತಿದ್ದ ಗುಂಟೂರು ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.

Home add -Advt


Related Articles

Back to top button