Latest

ನವೀನ್ ತಲೆಗೆ 51 ಲಕ್ಷ ಘೋಷಿಸಿದ್ದ ವ್ಯಕ್ತಿ ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಲಕ್ನೋ: ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ಫೇಸ್ ಬುಕ್ ಪೋಸ್ಟ್ ಮಾಡಿದ್ದ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದ ಮುಸ್ಲಿಂ ನಾಯಕನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶಹಜೀಬ್ ರಿಜ್ವಿ ಸಮಾಜವಾದಿ ಪಕ್ಷದ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ. ಮೀರತ್ ನ ಫಲ್ವಾಡಾ ಪಟ್ಟಣದ ರಸೂಲ್‍ಪುರ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಬಂಧಿತನ ವಿರುದ್ಧ ಮೀರತ್ ಪೊಲಿಸರು ಐಪಿಸಿ ಸೆಕ್ಷನ್ 153(ಎ)(ಎರಡು ಗುಂಪುಗಳ ನಡುವೆ ವೈಷಮ್ಯಕ್ಕೆ ಪ್ರಚೋದನೆ) ಹಾಗೂ 505(2) (ಕೋಮು ಸಂಘರ್ಷಕ್ಕೆ ಪ್ರೇರೇಪಣೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಫೇಸ್‍ಬುಕ್ ನಲ್ಲಿ ಸಮುದಾಯದ ಬಗ್ಗೆ ಬರೆದುಕೊಂಡಿರುವ ನವೀನ್ ತಲೆಯನ್ನು ತಂದವರಿಗೆ 51 ಲಕ್ಷ ಕೊಡುವುದಾಗಿ ರಿಜ್ವಿ ಘೋಷಣೆ ಮಾಡಿದ್ದನು. ಈ ವಿಡಿಯೋ ಭಾರೀ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ರಿಜ್ವಿಗಾಗಿ ತೀವ್ರ ಹುಡುಕಾಟ ನಡೆಸಿದ್ದು, ಇದೀಗ ಆತನನ್ನು ಬಂಧಿಸಿದ್ದಾರೆ.

ನವೀನ್ ಪೋಸ್ಟ್ ನಿಂದಾಗಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದೆ. ಅದಕ್ಕೆ ಪ್ರತಿಯಾಗಿ ಆತನ ತಲೆ ತಂದವರಿಗೆ 51 ಲಕ್ಷ ಕೊಡುವುದಾಗಿ ಘೋಷಿಸಿದ್ದನು. ಈ ಸಂಬಂಧ ನನ್ನನ್ನು ಬೆಂಬಲಿಸುವವರು ಹಣ ಸಂಗ್ರಹಿಸಿ ಕೊಡಿ ಎಂದು ರಿಜ್ವಿ ವಿಡಿಯೋದಲ್ಲಿ ಹೇಳಿದ್ದನು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button