Latest

ಪತ್ನಿಯ ಗುಪ್ತಾಂಗಕ್ಕೆ ಬೆಂಕಿಯಿಟ್ಟ ಪಾಪಿ ಪತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತಿ ಮಹಾಶಯನೊಬ್ಬ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ವಿಕೃತಿ ಮೆರೆದಿರುವ ಘಟನೆ ರಾಜಧಾನಿ ಬೆಂಗಳೂರಿನ ಟಿಸಿ ಪಾಳ್ಯದಲ್ಲಿ ನಡೆದಿದೆ.

ಕೃತ್ಯದ ಬಳಿಕ ಆರೋಪಿ ಸೂರಜ್ ಸಿಂಗ್ ಹಾಗೂ ಆತನ ತಾಯಿ ನಾಪತ್ತೆಯಾಗಿದ್ದಾರೆ. ಪತ್ನಿ ಸಾವು ಬದುಕಿನ ನಡುವೆ ಹೋರಾಟನ ಡೆಸಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪತಿ ಸೂರಜ್ ಸಿಂಗ್ ಹಾಗೂ ಆತನ ತಾಯಿ, ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆಯಾದ ಆರಂಭದಿಂದಲೂ ತವರಿನಿಂದ ಹಣ ತರುವಂತೆ ಪೀಡಿಸಿತ್ತಿದ್ದು, ಎರಡು ಬಾರಿ ತವರಿನಿಂದ ಹಣ ತಂದು ಕೊಟ್ಟಿದ್ದಳು. ಆದರೂ ಸೂರಜ್ ಹೆಂಡತಿಯ ಆಸ್ತಿ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

ವರದಕ್ಷಿಣೆ ವಿಚಾರಕ್ಕಾಗಿ ಪತಿ ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಇದೀಗ ಪತಿ ಸೂರಜ್ ಪತ್ನಿಯ ಗುಪ್ತಾಂಗಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಘಟನೆ ಬಳಿಕ ಬಳಿಕ ತಾಯಿ ಮಗ ಪರಾರಿಯಾಗಿದ್ದಾರೆ.

ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸೂರಜ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button