ಗೈನಾಕಾಲಜಿಸ್ಟ್ ಗೂ ವಕ್ಕರಿಸಿದ ಕೊರೊನಾ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಸ್ತ್ರೀ ರೋಗ ತಜ್ಞೆ(ಗೈನಾಕಾಲಾಜಿಸ್ಟ್)ಗೂ ಕೊರೊನಾ ಸೋಂಕು ದೃಢಪಟ್ಟಿದೆ.

ಹೌದು. ಬೆಂಗಳೂರಿನ ರಾಜಾಜಿನಗರದ ಇಎಸ್‍ಐ ಆಸ್ಪತ್ರೆಯಲ್ಲಿನ ಇಎಸ್‍ಐ ಆಸ್ಪತ್ರೆಯ ಸ್ತ್ರೀ ರೋಗ ವಿಭಾಗದ ಹೆಚ್‍ಒಡಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇದೀಗ ಆಸ್ಪತ್ರೆಯಲ್ಲಿ ಎಲ್ಲರಲ್ಲೂ ಆತಂಕ ಎದುರಾಗಿದೆ.

ದಿನಕ್ಕೆ ನೂರಾರು ಜನ ಗರ್ಭಿಣಿಯರು ಈ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ. ಗೈನಾಕಾಲಾಜಿಸ್ಟ್ ಗುರುವಾರದವರೆಗೆ ಕರ್ತವ್ಯಕ್ಕೆ ಬಂದಿದ್ದರು. ಅಲ್ಲದೇ ಒಪಿಡಿಯಲ್ಲಿ ಬರುವ ಗರ್ಭಿಣಿ ಯರನ್ನು ಎರಡು ದಿನ ನೋಡಿಕೊಂಡಿದ್ದಾರೆ. ಸಿಜೆರಿಯೆನ್ ಪ್ರಕಣಗಳನ್ನು ಸಹ ನಿಭಾಯಿಸಿದ್ದಾರೆ. ಗರ್ಭಿಣಿಯರ ವಾರ್ಡ್ ಗಳಿಗೂ ಹೆಚ್‍ಓಡಿ ಭೇಟಿ ನೀಡಿದ್ದಾರೆ.

ಈ ಗೈನಾಕಾಲಜಿಸ್ಟ್ ಪ್ರಾಧ್ಯಾಪಕಿ ಆಗಿರುವ ಕಾರಣ ಎಂಬಿಬಿಎಸ್ ವಿದ್ಯಾರ್ಥಿ ಗಳಿಗೆ ಪಾಠ ಸಹ ಮಾಡಿದ್ದಾರೆ. ಹೀಗಾಗಿ ಇಡೀ ರಾಜಾಜಿನಗರ ಇಎಸ್‍ಐ ಗೆ ಬಂದ ಗರ್ಭಿಣಿಯರಿಗೆ, ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಕೂಡ ಕೊರೊನಾ ಭೀತಿ ಆರಂಭವಾಗಿದೆ. ಹೆಚ್‍ಒಡಿಗೆ ಕೊರೊನಾ ತಗುಲುವ ಮೂಲಕ ರಾಜಾಜಿ ನಗರ ಇಎಸ್ ಐ ಆಸ್ಪತ್ರೆ ಕೊರೊನಾ ಹಬ್ ಆಗಿ ಮಾರ್ಪಟ್ಟಿದೆ.

Home add -Advt

ಇತ್ತೀಚೆಗೆ ಡೀನ್ ಕಚೇರಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಯುವಕನಿಗೆ ಹಾಗೂ ಮಕ್ಕಳ ವಿಭಾಗದಲ್ಲಿ ಮಗುವಿಗೂ ಕೊರೊನಾ ಸೋಂಕು ಹರಡಿತ್ತು. ಇಂದು ಗೈನಾಕಾಲಾಜಿಸ್ಟ್ ವಿಭಾಗದ ಮುಖ್ಯಸ್ಥೆಗೆ ಕೊರೊನಾ ಪಾಸಿಟಿವ್ ಬಂದಿರುವುದು ಆತಂಕವನ್ನು ಹೆಚ್ಚಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button